ಮಂಗಳೂರು: ಶ್ರೀ ಕ್ಷೇತ್ರ ಆರಿಕೋಡು ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪುಣ್ಯ ಉತ್ಸವ -Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ  ಬೆಳ್ತಂಗಡಿ ತಾಲೂಕಿನ ಬೆಳಾಲು ಶ್ರೀ ಕ್ಷೇತ್ರ ಆರಿಕೋಡಿ ಚಾಮುಂಡೇಶ್ವರಿ ದೇವಸ್ಥಾನದ ಸರಿಸುಮಾರು 800 ವರ್ಷಗಳ ಇತಿಹಾಸವಿದೆ, ಈ ಸಾನಿದ್ಯವನ್ನು ಮರದ ಕಟ್ಟೆಯ ರೂಪದಲ್ಲಿ ಅರಾಧಿಸಿ 40 ವರ್ಷಗಳಿಂದ ಡೊಂಬಯ್ಯ ಗೌಡರು ಗುಡಿ ಕಟ್ಟಿ ಪೂಜೆ ಪುರಸ್ಕಾರ ಮಾಡಿಕೊಂಡು ಬಂದಿದ್ದು ಒಂಬತ್ತು ಅವತಾರ ತಾಳಿದ ತಾಯಿ ದುರ್ಗೆ ಅರಿಕೋಡಿ ಕ್ಷೇತ್ರದಲ್ಲಿ ಒಂದೇ ಮರದಲ್ಲಿ ಒಂಬತ್ತು ಸಸ್ಯ ಪ್ರಭೇದಗಳ ರೂಪದಲ್ಲಿ ಕಾಣಿಸಿಕೊಂಡ ಅತೀ ವಿಶಿಷ್ಟ ಕಾರಣಿಕದ ಕ್ಷೇತ್ರವಾಗಿ ಬೆಳೆದು ನಿಂತಿದೆ.

ಈ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ವೈಭವದಿಂದ ನಡೆದಿದ್ದು ಈ ಪ್ರಯುಕ್ತ ಕ್ಷೇತ್ರದ ದೇವಿ ಚಾಮುಂಡೇಶ್ವರಿಗೆ ನೇಮೊತ್ಸವ ನಡೆಯಿತು
ಕ್ಷೇತ್ರದಲ್ಲಿ ಭಾರಿ ಪವಾಡವನ್ನೆ ಸೃಷ್ಟಿಸಿರುವ ಚಾಮುಂಡೇಶ್ವರಿ ಅಮ್ಮನ ಜೊತೆಗೆ ಗುಳಿಗ ನೆಲೆಸಿದ್ದು ನಂಬಿದವರ ಕೈಬಿಡದ ತಾಯಿ ಚಾಮುಂಡೇಶ್ವರಿ
ಭಕ್ತರ ಕಷ್ಟ ಕಾರ್ಪಣ್ಯಗಳನ್ನು ದೂರೀಕರಿಸಿ ಭಕ್ತರಿಗೆ ಅನುಗ್ರಹ ನೀಡಿರುತ್ತಾರೆ, ಕ್ಷೇತ್ರದಲ್ಲಿ ಸಂಕಲ್ಪ ಮಾಡಿಕೊಂಡಿರುವ ಮನೋಇಚ್ಚೆಯಂತೆ ಭಕ್ತರ ಕಷ್ಟಗಳನ್ನು ದೂರಮಾಡಿದ್ದಾಳೆ. ಆದ್ದರಿಂದಲೇ ಬೇರೆ ಊರಿನಿಂದ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ..

ಚಾಮುಂಡೇಶ್ವರಿ ದೇವಿಯ ಪುಣ್ಯ ಉತ್ಸವದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ನೇಮೊತ್ಸವನ್ನು ಕಣ್ತುಂಬಿಕೊಂಡರು.