ಶ್ರೀದುರ್ಗಾಂಬ ಮೋಟಾರ್ಸ್ ಮಾಲಕ ಸುನಿಲ್ ಚಾತ್ರ ರಸ್ತೆ ಅಪಘಾತಕ್ಕೆ ಬಲಿ

Featured, ಉಡುಪಿ

ಕುಂದಾಪುರ:ರಾವಳಿ ಭಾಗದ ಖಾಸಗಿ ಸಾರಿಗೆ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರಾಗಿರುವ ಶ್ರೀ ದುರ್ಗಾಂಬ ಸಾರಿಗೆ ಸಂಸ್ಥೆಯ ಪಾಲುದಾರರಲ್ಲಿ ಒಬ್ಬರಾಗಿದ್ದ ಸುನಿಲ್ ಚಾತ್ರ (41) ಅವರು ಶುಕ್ರವಾರದಂದು ತಮಿಳುನಾಡಿನ ನಮಕ್ಕಲ್ ಜಿಲ್ಲೆಯ ಪರಮತಿ ವೆಲೂರ್ ಬೈಪಾಸ್ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇವರು ಶ್ರೀ ದುರ್ಗಾಂಬ ಬಸ್ ಕಂಪೆನಿಯ ಮಾಲಕ ಸಚ್ಚಿದಾನಂದ ಚಾತ್ರ ಅವರ ಪುತ್ರರಾಗಿದ್ದಾರೆ.

ಅಪಘಾತದ ತೀವ್ರತೆಗೆ ಇವರು ಪ್ರಯಾಣಿಸುತ್ತಿದ್ದ ಪಜೆರೋ SUV ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತಕ್ಕೆ ಸಂಬಂಧಿಸಿದ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.