ಸಂಪೂರ್ಣ ಧೂಳುಮಯವಾದ ಕಾಪು ಇನ್ನು ಎಚ್ಚೆತ್ತುಕೊಳ್ಳದ ಪುರಸಭೆ..!!

ಉಡುಪಿ

ಕಾಪು : ಕಳೆದ ಒಂದು ತಿಂಗಳಿನಿಂದ ಒಳಚರಂಡಿ ಕಾಮಗಾರಿ ನೆಪದಲ್ಲಿ ಕಾಪು ನಗರದೊಳಗೆ ಅಲ್ಲಲ್ಲಿ ಗುಂಡಿಅಗೆದು ಅರ್ಧಂಭರ್ಧ ಕಾಮಗಾರಿ ಮಾಡಿದ ದಿನದಿಂದ ಕಾಪು ನಗರ ಪ್ರದೇಶ ಸಂಪೂರ್ಣ ಧೂಳುಮಯವಾಗಿದೆ ಆದರೇ ಪುರಸಭೆ ಮಾತ್ರ ತುಟಿಪಿಟಿಕ್ ಎನ್ನದೆ ಸುಮ್ಮನೆ ಕೂತಿರುವುದು ಅಂಗಡಿ ಮಾಲಕರ ಆಕ್ರೋಶಕ್ಕೆ ಕಾರಣವಾಗಿದೆ.

ಒಳಚರಂಡಿ ಕಾಮಗಾರಿಯ ಕೆಲಸ ಕಳೆದ ಮಣ್ಣು ಕುಸಿದು ಕಾರ್ಮಿಕರಿಬ್ಬರು ಸಾವನಪ್ಪಿದ ದಿನದಿಂದ ಸ್ಥಗಿತಗೊಂಡಿದ್ದು ಧೂಳು ಮಾತ್ರ ಇಡೀ ನಗರಪ್ರದೇಶವನ್ನು ಆವರಿಸಿಕೊಂಡು ರಿಕ್ಷಾ ಚಾಲಕ ಹಾಗೂ ಪ್ರಯಾಣಿಕರಿಗೆ ಸಂಕಷ್ಠ  ಉಂಟುಮಾಡಿದೆ. ಈ ಬಗ್ಗೆ ಸ್ಥಳಿಯಾಡಳಿತ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸವೆ ಸರಿ