ಸಂಸದರ ನಿಧಿ ಬಳಕೆಯಲ್ಲಿ ಪ್ರತಾಪ ಸಿಂಹ ನಂ.1..- Vishwanews24

Featured, ರಾಷ್ಟ್ರ ನ್ಯೂಸ್

ನವದೆಹಲಿ :  17ನೇ ಲೋಕಸಭೆ ಚುನಾವಣೆ ದಿನಾಂಕ ಘೋಷಣೆಗೆ ಕ್ಷಣಗಣನೆ ಪ್ರಾರಂಭವಾಗಿರುವಾಗಲೇ 16ನೇ ಲೋಕಸಭೆ ಅವಧಿಯಲ್ಲಿ ರಾಜ್ಯದ ಸಂಸದರು ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ ಸಂಸದರ ಪ್ರದೇಶಾಭಿವೃದ್ಧಿ ನಿಧಿಯನ್ನು ಪರಿಪೂರ್ಣವಾಗಿ ಬಳಸಲು ವಿಫಲರಾಗಿದ್ದಾರೆ ಎಂಬ ಸಂಗತಿ ಬೆಳಕಿಗೆ ಬಂದಿದೆ.

ಕಳೆದ ಐದು ವರ್ಷಗಳ ಅವಧಿಯಲ್ಲಿ ತಮಗೆ ಬಿಡುಗಡೆಯಾದ ಒಟ್ಟಾರೆ ನಿಧಿಯಲ್ಲಿ ರಾಜ್ಯದ ಸಂಸದರು ಇನ್ನೂ 85 ಕೋಟಿ ರು.ಗಳನ್ನು ಬಳಸದೇ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಅಂಕಿ-ಅಂಶಗಳು ಹೇಳುತ್ತಿವೆ. ಆದಾಗ್ಯೂ ಮೈಸೂರು ಸಂಸದ ಪ್ರತಾಪ ಸಿಂಹ ಅವರು ಅತಿ ಹೆಚ್ಚು ಅನುದಾನ ಬಳಕೆ ಮಾಡಿದ್ದಾರೆ. ಆದರೆ ಕೇಂದ್ರ ಸಚಿವರೂ ಆಗಿರುವ ವಿಜಯಪುರ ಸಂಸದ ರಮೇಶ್‌ ಜಿಗಜಿಣಗಿ, ಚಿಕ್ಕಬಳ್ಳಾಪುರ ಸಂಸದ ವೀರಪ್ಪ ಮೊಯ್ಲಿ ಅತಿ ಕಡಿಮೆ ಬಳಕೆ ಮಾಡಿದ್ದಾರೆ.

ಮೈಸೂರಿನ ಸಂಸದ ಪ್ರತಾಪ್‌ ಸಿಂಹ ತಮಗೆ ಬಿಡುಗಡೆಯಾಗಿರುವ .22.50 ಕೋಟಿಯಲ್ಲಿ ಕೇವಲ .5 ಲಕ್ಷ ಮಾತ್ರ ಬಾಕಿ ಉಳಿಸಿಕೊಂಡಿದ್ದಾರೆ. ಬೆಂಗಳೂರು ಸೆಂಟ್ರಲ… ಸಂಸದ ಪಿ.ಸಿ.ಮೋಹನ್‌ .17.50 ಕೋಟಿಯಲ್ಲಿ ಕೇವಲ .23 ಲಕ್ಷ, ಹಾವೇರಿಯ ಸಂಸದ ಶಿವಕುಮಾರ್‌ ಉದಾಸಿ .17.50 ಕೋಟಿಯಲ್ಲಿ ಕೇವಲ .19 ಲಕ್ಷ ಮಾತ್ರ ಬಾಕಿಯಿರಿಸಿಕೊಂಡಿದ್ದಾರೆ. ಕೋಲಾರ ಸಂಸದ ಕೆ.ಎಚ್‌.ಮುನಿಯಪ್ಪ .17.50 ಕೋಟಿಯಲ್ಲಿ .31 ಲಕ್ಷ ಮಾತ್ರ ಬಳಸಿಲ್ಲ. ತುಮಕೂರು ಸಂಸದ ಮುದ್ದ ಹನುಮೇಗೌಡ .22.50 ಕೋಟಿಯಲ್ಲಿ 61 ಲಕ್ಷ ಮಾತ್ರ ಖರ್ಚು ಮಾಡಲು ಬಾಕಿಯಿದೆ. ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಬಿಡುಗಡೆಯಾಗಿರುವ .17.50 ಕೋಟಿಗಳಲ್ಲಿ .85 ಲಕ್ಷ ಬಳಸಿಲ್ಲ.

ಪ್ರತಾಪ್‌ಸಿಂಹ ಶೇ.99.50 ಸಾಧನೆ ಮಾಡಿದ್ದರೆ, ಮುನಿಯುಪ್ಪ ಶೇ.97.27, ಶೋಭಾ ಕರಂದ್ಲಾಜೆ ಶೇ.103.94, ಪಿ.ಸಿ.ಮೋಹನ್‌ ಶೇ.103.12, ಮುದ್ದಹನುಮೇಗೌಡ ಶೇ.102.46 ಮತ್ತು ಶಿವಕುಮಾರ್‌ ಉದಾಸಿ ಶೇ.100.86ರ ಸಾಧನೆ ಮಾಡಿದ್ದಾರೆ. ಸಂಸದರ ನಿಧಿಯನ್ನು ಸರ್ಕಾರ ಬ್ಯಾಂಕ್‌ ಖಾತೆಗೆ ಜಮೆ ಮಾಡುವುದರಿಂದ, ವಿಳಂಬವಾಗಿ ಬಳಸಿದರೆ ಬ್ಯಾಂಕಿನಿಂದ ಬಡ್ಡಿಯೂ ಸಿಗುತ್ತದೆ. ಹೀಗಾಗಿ ಕೆಲವು ಸಂಸದರು ಶೇ.100ಕ್ಕಿಂತ ಹೆಚ್ಚು ಪ್ರಗತಿ ಸಾಧಿಸಿದ್ದಾರೆ.

ಕಡಿಮೆ ಬಾಕಿ ಉಳಿಸಿಕೊಂಡವರು

ಪ್ರತಾಪ್‌ ಸಿಂಹ    ಮೈಸೂರು    22.50 ಕೋಟಿ    5 ಲಕ್ಷ

ಶಿವಕುಮಾರ್‌ ಉದಾಸಿ    ಹಾವೇರಿ    17.50 ಕೋಟಿ    19 ಲಕ್ಷ

ಕೆ.ಎಚ್‌. ಮುನಿಯಪ್ಪ    ಕೋಲಾರ    17.50 ಕೋಟಿ    31 ಲಕ್ಷ

ಪಿ.ಸಿ. ಮೋಹನ್‌    ಬೆಂ.ಸೆಂಟ್ರಲ್‌    17.50 ಕೋಟಿ    23 ಲಕ್ಷ

ಮುದ್ದಹನುಮೇಗೌಡ    ತುಮಕೂರು    22.50 ಕೋ    ಟಿ    61 ಲಕ್ಷ

ಶೋಭಾ ಕರಂದ್ಲಾಜೆ    17.50 ಕೋಟಿ    85 ಲಕ್ಷ