ಸಚಿವ ಕೋಟಾ ಶ್ರೀನಿವಾಸ ಪುಜಾರಿ ಕಾರಿಗೆ ಬಸ್ಸು ಡಿಕ್ಕಿ- ಅದೃಷ್ಟವಶಾ ಪಾರಾದ ಸಚಿವ-vishwanews24

Featured, ಉಡುಪಿ

ಸಚಿವ ಕೋಟಾ ಶ್ರೀನಿವಾಸ ಪುಜಾರಿ ಕಾರಿಗೆ ಬಸ್ಸು ಡಿಕ್ಕಿ- ಅದೃಷ್ಟವಶಾ ಪಾರಾದ ಸಚಿವ

ಬೆಂಗಳೂರು: ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಯಾಣಿಸುತ್ತಿದ್ದ ಕಾರಿಗೆ,  ಕೆಎಸ್ ಆರ್ ಟಿಸಿ ಬಸ್ ಢಿಕ್ಕಿ ಹೊಡೆದ ಘಟನೆ ಬೆಂಗಳೂರು ಹೊರವಲಯದ ನೈಸ್ ರಸ್ತೆ ಬಳಿ ನಡೆದಿದೆ.ಕಾರಿಗೆ ಪೆಟ್ರೋಲ್ ಹಾಕಿಸಿಕೊಂಡು ಹಿಂದಿರುಗುತ್ತಿದ್ದಾಗ ಕೆಎಸ್ ಆರ್ ಟಿಸಿ ಬಸ್ ಢಿಕ್ಕಿ ಹೊಡೆದಿದ್ದು, ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕಾರಿನ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಪಘಾತದಲ್ಲಿ ಸಚಿವರು ಪ್ರಯಾಣಿಸುತ್ತಿದ್ದ ಕಾರಿಗೆ ಭಾಗಶಃ ಹಾನಿಯಾಗಿದೆ ಎಂದು ವರದಿಯಾಗಿದೆ.

ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.