ಸಚಿವ ಸ್ಥಾನ ವಂಚಿತ ಎಂ.ಬಿ.ಪಾಟೀಲ್ ರಾಜೀನಾಮೆ..?!
ಬೆಂಗಳೂರು: ಎಂ.ಬಿ ಪಾಟೀಲ್ ಗೆ ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲು ಮುಂದಾಗಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ತನ್ನ ಮೊದಲ ಸಚಿವರ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ಸಚಿವ ಎಂ.ಬಿ ಪಾಟೀಲ್ ಹೆಸರು ಇತ್ತು. ಆದರೆ ಇಂದು ಪ್ರಮಾಣವಚನ ಸ್ವೀಕರಿಸುವ ಶಾಸಕರ ಪಟ್ಟಿಯಲ್ಲಿ ಹೆಸರು ಇಲ್ಲದ ಕಾರಣ ಎಂಬಿ ಪಾಟೀಲ್ ಶಾಸಕ ಸ್ಥಾನ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.
ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ಸದಾಶಿವನಗರದಲ್ಲಿರುವ ಶಾಸಕರ ನಿವಾಸ ಮುಂದೆ ಎಂ.ಬಿ ಪಾಟೀಲ್ ಮನೆ ಮುಂದೆ ಬೆಂಬಲಿಗರು ಪ್ರತಿಭಟನೆ ಮುಂದಾಗಿದ್ದರು. ಮನೆಯ ಮುಂದೆ ಪ್ರತಿಭಟನೆಗೆ ಅವಕಾಶ ನೀಡದ ಕಾರಣ ಪಾಟೀಲ್ ಅಭಿಮಾನಿಗಳು ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ಈ ಹಿಂದಿನ ಸರಕಾರದಲ್ಲಿ ಸಿದ್ದರಾಮಯ್ಯರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಮಾಜಿ ಸಚಿವರಾದ ಎಂ.ಬಿ. ಪಾಟೀಲ್ ರಿಗೆ ಈ ಬಾರಿ ಸಚಿವ ಸ್ಥಾನ ಸಿಗದೇ ಇದ್ದಿದ್ದು ಅವರ ಬೆಂಬಲಿಗರಲ್ಲಿ ಆಕ್ರೋಶ ಮೂಡಿಸಿದ್ದು ಇವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ. ಇದಕ್ಕೆ ಪುಷ್ಠಿ ನೀಡುವಂತೆ ಎಂ.ಬಿ. ಪಾಟೀಲ್ ಅವರು ಇಂದು ಮಧ್ಯಾಹ್ನ 1.15 ಕ್ಕೆ ಸ್ಪೀಕರ್ ಭೇಟಿಗೆ ಅವಕಾಶ ಕೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.ಇನ್ನು ಸಚಿವ ಸ್ಥಾನದಿಂದ ವಂಚಿತರಾಗಿರುವ ಬಿ.ಸಿ.ಪಾಟೀಲ್, ಪರಮೇಶ್ವರ್ ನಾಯ್ಕ್, ಸತೀಶ್ ಜಾರಕಿಹೋಳಿ, ಡಾ.ಅಜಯ್ ನಾಯಕ್ ಅವರೂ ಸಹ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದು ಕಾಂಗ್ರೆಸ್ ನಲ್ಲಿ ದುಡ್ಡಿದ್ದವರಿಗೆ ಮಾತ್ರ ಸಚಿವ ಸ್ಥಾನ ಎಂದು ಶಾಸಕ ಬಿ.ಸಿ ಪಾಟೀಲ್ ಹೈಕಮಾಂಡ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜೊತೆಗೆ ಮತ್ತೊಬ್ಬ ಸಚಿವ ಸ್ಥಾನ ವಂಚಿತ ಎಚ್.ಎಂ.ರೇವಣ್ಣ ಇದು ಕುರುಬ ಸಮಾಜಕ್ಕೆ ಮಾಡಿರೋ ಅಗೌರವ ಎಂದು ಕಿಡಿ ಕಾರಿದ್ದಾರೆ. ಇನ್ನು ಶಾಸಕ ಕೃಷ್ಣ ಭೈರೇಗೌಡ ರವರು ಎಂ.ಬಿ.ಪಾಟೀಲ್ ರವರ ಬೆಂಗಳೂರು ನಿವಾಸಕ್ಕೆ ತೆರಳಿ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ.

One thought on “ಸಚಿವ ಸ್ಥಾನ ವಂಚಿತ ಎಂ.ಬಿ.ಪಾಟೀಲ್ ರಾಜೀನಾಮೆ..?!”
ಆದಷ್ಟು ಬೇಗ ಬಿಜೆಪಿ ಸೇರಿಕೊಂಡು ನಿಮ್ಮ ಮಾನ ಉಳಿಸಿಕೊಳ್ಳಲು ವಿನಂತಿಸುತ್ತೇನೆ. ಆವಾಗ ನಿವು ಮಾಡಿದ ಕರ್ಮ ನಿವಾರಣೆ ಆಗುತ್ತದೆ.
Comments are closed.