ಸಮುದ್ರದ ಅಲೆಗಳ ಅಬ್ಬರಕ್ಕೆ ಮಕ್ಕಳ ಮುಂದೆಯೇ ಕೊಚ್ಚಿ ಹೋದ ತಾಯಿ ; ವಿಡಿಯೋ ವೈರಲ್ – Vishwanews24
ಸಮುದ್ರದ ಅಲೆಗಳ ಅಬ್ಬರಕ್ಕೆ ಮಕ್ಕಳ ಮುಂದೆಯೇ ಕೊಚ್ಚಿ ಹೋದ ತಾಯಿ-ವಿಡಿಯೋ ವೈರಲ್
ಮುಂಬಯಿ: ತಾಯಿಯೊಬ್ಬಳು ಪುಟ್ಟ ಮಕ್ಕಳ ಕಣ್ಣು ಮುಂದೆಯೇ ಸಮುದ್ರದ ಅಲೆಗಳ ಅಬ್ಬರಕ್ಕೆ ಕೊಚ್ಚಿ ಹೋದ ಹೃದಯ ಹಿಂಡುವ ಘಟನೆ ಮುಂಬಯಿಯ ಬಾಂದ್ರಾದಲ್ಲಿರುವ ಬ್ಯಾಂಡ್‌ಸ್ಟ್ಯಾಂಡ್ ನಲ್ಲಿ ನಡೆದಿದೆ. ಈ ಘಟನೆಯಲ್ಲಿ ಜ್ಯೋತಿ ಸೋನಾರ್(32) ಮೃತ ಮಹಿಳೆ.
ಜ್ಯೋತಿ ಸೋನಾರ್ ಅವರು ಪತಿ ಹಾಗೂ ತನ್ನ ಮಕ್ಕಳೊಂದಿಗೆ ಪಿಕ್ ನಿಕ್ ಗೆಂದು ಜುಹು ಚೌಪಾಟಿಗೆ ಬಂದಿದ್ದರು. ಆದರೆ ಅಲೆಗಳ ಅಬ್ಬರ ಹೆಚ್ಚಾಗಿರುವ ಕಾರಣ ಜುಹು ಬೀಚ್ ಗೆ ಪ್ರವೇಶ ನಿಷೇಧಿಸಲಾಗಿತ್ತು. ಹೀಗಾಗಿ ಕುಟುಂಬ ಬಾಂದ್ರಾಕ್ಕೆ ಬಂದಿತ್ತು.
ಬಾಂದ್ರಾದಲ್ಲಿ ಸಮುದ್ರದ ಬಳಿ ಜ್ಯೋತಿ ತನ್ನ ಪತಿಯ ಜತೆ ಫೋಟೋ ತೆಗೆಸಿಕೊಳ್ಳಲು ಬಂಡೆಯ ಮೇಲೆ ಕೂತಿದ್ದಾರೆ. ಈ ಸಂದರ್ಭದಲ್ಲಿ ಸಮುದ್ರದ ಅಲೆಗಳು ಅಪ್ಪಳಿಸುತ್ತಿದ್ದರೂ ಫೋಟೋಗಾಗಿ ಜ್ಯೋತಿ ಗಂಡನನ್ನು ಹಿಡಿದುಕೊಂಡು ಕೂತಿದ್ದಾರೆ. ಮಕ್ಕಳ ಕೈಯಲ್ಲಿ ಮೊಬೈಲ್ ಕೊಟ್ಟು ಖುಷಿಯಿಂದ ಪೋಸ್ ಕೊಟ್ಟಿದ್ದಾರೆ. ಆದರೆ ರಭಸವಾಗಿ ಅಪ್ಪಳಿಸಿದ ಅಲೆಯೊಂದು ಜ್ಯೋತಿ ಅವರನ್ನು ಎಳೆದುಕೊಂಡೇ ಹೋಗಿದೆ. ಇದನ್ನು ನೋಡಿದ ಮಕ್ಕಳು “ಅಮ್ಮ ಅಮ್ಮ..” ಎಂದು ಕೂಗಲು ಶುರು ಮಾಡಿದ್ದಾರೆ.
ಉಡುಪಿ: ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ ನಲ್ಲಿ ಸ್ಪಾರ್ಕಲ್ ಆಫ್ ಹೆವೆನ್ ಸಂಗ್ರಹ ಬಿಡುಗಡೆ – Vishwanews24
ಈ ವೇಳೆ ಅಲ್ಲೇ ಇದ್ದ ಸ್ಥಳೀಯ ನಿವಾಸಿ ಮುಕೇಶ್ ಎನ್ನುವರು ಜ್ಯೋತಿ ಅವರ ಸೀರೆಯನ್ನು ಹಿಡಿದು ಅವರನ್ನು ರಕ್ಷಿಸಲು ಯತ್ನಿಸಿದ್ದಾರೆ. ಆದರೆ ಮುಕೇಶ್ ಕೂಡ ಈ ಪ್ರಯತ್ನದಲ್ಲಿ ವಿಫಲವಾದಗ ಬೇರೆಯವರು ಮುಕೇಶ್ ಅವರ ಕಾಲನ್ನು ಎಳೆದು ಹೊರಕ್ಕೆ ಎಳೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದ ಪೊಲೀಸರು, ಅಗ್ನಿಶಾಮಕ ದಳದ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿದ್ದಾರೆ. ಕಾರ್ಯಾಚರಣೆಯಲ್ಲಿ ಜ್ಯೋತಿ ಅವರ ಮೃತದೇಹವನ್ನು ಹೊರಕ್ಕೆ ತೆಗೆದು ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ವರದಿ ತಿಳಿಸಿದೆ. ಇದೀಗ ಮೊಬೈಲ್‌ನಲ್ಲಿ ಸೆರೆಯಾದ ವಿಡಿಯೋ ವೈರಲ್ ಆಗಿದೆ.
This is so horrible How can a person risk their life for some videos..
The lady has swept away and lost her life in front of his kid.#bandstand #Mumbai pic.twitter.com/xMat7BGo34— Pramod Jain (@log_kyasochenge) July 15, 2023
