ಸರಕಾರ ಜಾರಿ ಮಾಡಿರುವ ಕೋವಿಡ್ ನಿಯಮಗಳನ್ನು ಪಾಲಿಸುತ್ತಲೇ ವಿನಾಯಕನನ್ನು ಪೂಜಿಸೋಣ : ಎಚ್‌ಡಿಕೆ -Vishwanews24
ಸರಕಾರ ಜಾರಿ ಮಾಡಿರುವ ಕೋವಿಡ್ ನಿಯಮಗಳನ್ನು ಪಾಲಿಸುತ್ತಲೇ ವಿನಾಯಕನನ್ನು ಪೂಜಿಸೋಣ : ಎಚ್‌ಡಿಕೆ -Vishwanews24
ಬೆಂಗಳೂರು: ಗಣೇಶ ಚತುರ್ಥಿ ಹಬ್ಬದ ಸಂಭ್ರಮ ನಾಡಿನೆಲ್ಲೆಡೆ ಮನೆ ಮಾಡಿದ್ದು,ನಾಡಿನ ಸಮಸ್ತ ಜನತೆಗೆ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಶುಭಕೋರಿದ್ದಾರೆ.
ಗಣೇಶ ಚತುರ್ಥಿ ಹಿನ್ನೆಲೆ ಟ್ವೀಟ್ ಮಾಡಿರುವ ಅವರು, ನಾಡಿನ ಸಮಸ್ತ ಜನತೆಗೆ ಗಣೇಶ ಚತುರ್ಥಿಯ ಶುಭಾಶಯಗಳು. ಆ ತಾಯಿ ಗೌರಿ ಸರ್ವರಿಗೂ ಸನ್ಮಂಗಳ ಉಂಟು ಮಾಡಲಿ. ಶ್ರೀ ವಿಘ್ನೇಶ್ವರನು ಎಲ್ಲರ ವಿಘ್ನಗಳನ್ನು ನಿವಾರಿಸಿ ಕರುಣೆ ತೋರಲಿ. ಹಬ್ಬವನ್ನು ನಮ್ಮ ಮನೆ-ಮನಗಳಲ್ಲಿ ಸಂಭ್ರಮದಿಂದ, ಶ್ರದ್ಧೆ-ಭಕ್ತಿಯಿಂದ ಆಚರಿಸೋಣ. ಕೊರೊನಾ ಅಪಾಯ ಮರೆಯದಿರೋಣ. ಆದಷ್ಟು ಬೇಗ ಮಹಾಮಾರಿ ವೈರಸ್ ತೊಲಗಲಿ ಎಂದು ಪ್ರಾರ್ಥಿಸೋಣ ಎಂದು ಹೇಳಿದ್ದಾರೆ.
ಎಲ್ಲೂ ಮೈಮರೆಯುವುದು ಬೇಡ, ಇನ್ನೊಬ್ಬರಿಗೆ ತೊಂದರೆ ಆಗುವುದೂ ಬೇಡ. ರಾಜ್ಯ ಸರಕಾರ ಜಾರಿ ಮಾಡಿರುವ ಕೋವಿಡ್-19 ನಿಯಮಗಳನ್ನು ಪಾಲಿಸುತ್ತಲೇ ವಿನಾಯಕನನ್ನು ಪೂಜಿಸೋಣ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಆ ಗೌರಿಪುತ್ರನಲ್ಲಿ ಪ್ರಾರ್ಥನೆ ಮಾಡುವೆ.(3/3)
— H D Kumaraswamy (@hd_kumaraswamy) September 8, 2021
