ಸರ್ಕಾರ ಜನರ ಮನಸ್ಸಲ್ಲಿ ಸಂಶಯ ಉಳಿಯುವಂತೆ ಮಾಡಬಾರದು : ಯುಟಿ ಖಾದರ್ -Vishwanews24

Featured, ರಾಜ್ಯ ನ್ಯೂಸ್

ಸರ್ಕಾರ ಜನರ ಮನಸ್ಸಲ್ಲಿ ಸಂಶಯ ಉಳಿಯುವಂತೆ ಮಾಡಬಾರದು : ಯುಟಿ ಖಾದರ್ -Vishwanews24

ಬೆಂಗಳೂರು:  ರಾತ್ರಿ ಕರ್ಫ್ಯೂ ಹಿಂಪಡೆದಿರುವ ಬಗ್ಗೆ ಪ್ರತಿಕ್ರಿಯಿ ಸರ್ಕಾರದಲ್ಲಿ ಎಲ್ಲವೂ ಗೊಂದಲವೇ ಆಗೋಗಿದೆ. ಮೊದಲು ಒಂದು ನಿರ್ಧಾರ ಮಾಡ್ತಾರೆ, ಆಮೇಲೆ ಆದೇಶ ವಾಪಸ್ ಪಡಿತಾರೆ. ಎಲ್ಲ ಸಂದರ್ಭದಲ್ಲೂ ಹೀಗೇ ಗೊಂದಲಕಾರಿ ನಿರ್ಧಾರ ತೆಗೆದುಕೊಳ್ತಾರೆ. ಸರ್ಕಾರ ಜನರ ಮನಸ್ಸಲ್ಲಿ ಸಂಶಯ ಉಳಿಯುವಂತೆ ಮಾಡಬಾರದು. ಜನರ ಸಂಶಯಗಳನ್ನು ಬಗೆಹರಿಸುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಮಾಜಿ ಸಚಿವ ಯುಟಿ ಖಾದರ್ ತಿಳಿಸಿದ್ದಾರೆ.

ಹೊಸ ತಳಿಯ ಕೊರೊನಾ ಯಾವಾಗ ಸ್ಫೋಟಗೊಳ್ಳತ್ತೆ ಗೊತ್ತಿಲ್ಲ. ಆದರೆ, ಸರ್ಕಾರ ಹಳೆ ಕೋವಿಡ್ ಕೇರ್ ಸೆಂಟರ್​​ಗಳನ್ನು ಯೋಚನೆ ಮಾಡದೆ ಕ್ಲೋಸ್ ಮಾಡಿತು. ಈಗ ಜನ ಎಲ್ಲಿಗೆ ಹೋಗಬೇಕು? ಏನು ಚಿಕಿತ್ಸೆ ಪಡೆದುಕೊಳ್ಳಬೇಕು? ಅನ್ನೋದೇ ಗೊಂದಲ ಆಗ್ತಿದೆ ಎಂದಿದ್ದಾರೆ.