ಸರ್ಕಾರ ಬೀಳಿಸುವುದರಲ್ಲಿ ರಾಜ್ಯ ಬಿಜೆಪಿ ನಾಯಕರ ಪಾತ್ರವಿಲ್ಲ : ಬಿಜೆಪಿ ಪರ ಜೆಡಿಎಸ್ ಸಚಿವ ಜಿ.ಟಿ. ದೇವೇಗೌಡ -Vishwanews24

Featured, ಜಿಲ್ಲೆ, ರಾಜ್ಯ ನ್ಯೂಸ್

ಮೈಸೂರು: ಬಿಜೆಪಿ ಪರ ಹೇಳಿಕೆ ನೀಡುವ ಮೂಲಕ ಜೆಡಿಎಸ್ ಸಚಿವ ಜಿ.ಟಿ. ದೇವೇಗೌಡ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದ್ದಾರೆ.

ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ರಾಜೀನಾಮೆ ಕೊಡಿಸೋಕೆ ಹೋಗಿಲ್ಲ ಎಂದು ಮೈಸೂರಿನಲ್ಲಿ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಹೇಳಿದ್ದಾರೆ. ಸರ್ಕಾರ ಬೀಳಿಸುವುದರಲ್ಲಿ ರಾಜ್ಯ ಬಿಜೆಪಿ ನಾಯಕರ ಪಾತ್ರವಿಲ್ಲ. ಅದೇನಿದ್ದರೂ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರ ಕೈಯಲ್ಲಿದೆ. ಬೇರೆ ಯಾರೂ ನಿರ್ದೇಶನ ನೀಡಿದರು ಅದು ಅಧಿಕೃತವಲ್ಲ ಎಂದು ತಿಳಿಸಿದ್ದಾರೆ.

ಮೋದಿ, ಅಮೀತ್ ಷಾ ಬಜೆಟ್ ಹಾಗೂ ಅಧಿವೇಶನ ಕಡೆ ಗಮನ ಹರಿಸಿದ್ದಾರೆ. ಕಾಶ್ಮಿರ ಸಮಸ್ಯೆ, ಅಮೆರಿಕಾ, ಚೀನಾ ಜೊತೆ ಮಾತುಕತೆಯಲ್ಲಿ ಮಗ್ನರಾಗಿದ್ದಾರೆ.ಬಿಜೆಪಿ ನಾಯಕರ ಮೇಲೆ ಕೆಸರೆರಚುವ ಅಗತ್ಯವಿಲ್ಲ ಜೆಡಿಎಸ್‌ನಲ್ಲಿ ಯಾರು ರಾಜೀನಾಮೆ ಕೊಟ್ಟಿಲ್ಲ. ಕಾಂಗ್ರೆಸ್‌ನಲ್ಲಿ ರಮೇಶ್ ಜಾರಕಿಹೊಳಿ ರಾಜೀನಾಮೆ ಹೊಸದಲ್ಲ. ಆನಂದ್‌ಸಿಂಗ್‌ಗೆ ಪಾಪ ಏನು ಕಷ್ಟ ಇತ್ತೋ ಗೊತ್ತಿಲ್ಲ. ಯಾರು ಯಾರ ಮೇಲು ಕೇಸರೇರೆಚೋ ಪ್ರಶ್ನೆಯೇ ಇಲ್ಲ ಜಿ.ಟಿ.ದೇವೇಗೌಡರು ಬಿಜೆಪಿ ಪರ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ