ಸರ್ಕಾರಕ್ಕೆ ಶಾಂತಿಯುತ ಸತ್ಯಾಗ್ರಹ ಇಷ್ಟವಾಗಿಲ್ಲ ,  ಹೀಗಾಗಿ ‘ಭಾರತ್ ಬಂದ್’ ಪ್ರತಿಭಟನೆಗೆ ಕರೆ ನೀಡಲಾಗಿದೆ’ : ರಾಹುಲ್ ಗಾಂಧಿ -Vishwanews24

Featured, ರಾಷ್ಟ್ರ ನ್ಯೂಸ್

ಸರ್ಕಾರಕ್ಕೆ ಶಾಂತಿಯುತ ಸತ್ಯಾಗ್ರಹ ಇಷ್ಟವಾಗಿಲ್ಲ ,  ಹೀಗಾಗಿ ‘ಭಾರತ್ ಬಂದ್’ ಪ್ರತಿಭಟನೆಗೆ ಕರೆ ನೀಡಲಾಗಿದೆ’ : ರಾಹುಲ್ ಗಾಂಧಿ -Vishwanews24

ನವದೆಹಲಿ: ಶೋಷಣೆ ಮನೋಭಾವದ ಸರ್ಕಾರಕ್ಕೆ ಶಾಂತಿಯುತ ಸತ್ಯಾಗ್ರಹ ಇಷ್ಟವಾಗಿಲ್ಲ. ಹೀಗಾಗಿಯೇ ‘ಭಾರತ್ ಬಂದ್’ ಪ್ರತಿಭಟನೆಗೆ ಕರೆ ನೀಡಲಾಗಿದೆ’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ. ಕೇಂದ್ರದ ಮೂರು ಕೃಷಿ ತಿದ್ದುಪಡಿ ಕಾಯ್ದೆಗಳ ವಿರುದ್ಧದ ನಡೆಯುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿ ಕಾಂಗ್ರೆಸ್ ಪಕ್ಷದ ರಾಜ್ಯ ಘಟಕಗಳ ಮುಖ್ಯಸ್ಥರು, ಅಧ್ಯಕ್ಷರು, ಮುಂಚೂಣಿ ಸಂಘಟನೆಗಳೂ ಪ್ರತಿಭಟನೆ ನಡೆಸಬೇಕು ಎಂದು ಹೇಳಿದ್ದಾರೆ.

ಸಂಯುಕ್ತ ಕಿಸಾನ್ ಮೋರ್ಚಾ (ಎಸ್ ಕೆಎಂ) ನೀಡಿರುವ ಕರೆಯಂತೆ ಸೋಮವಾರ ದೇಶದಾದ್ಯಂತ ನಡೆಯುವ 10 ಗಂಟೆ ಅವಧಿಯ ಈ ಮುಷ್ಕರಕ್ಕೆ ಎನ್ ಡಿಎಯೇತರ ವಿವಿಧ ಪಕ್ಷಗಳು ಕೈಜೋಡಿಸಿವೆ. ಪ್ರತಿಭಟನೆ ಬೆಂಬಲಿಸಿ ‘ಐ ಸ್ಟ್ಯಾಂಡ್ ವಿತ್ ಫಾರ್ಮರ್ಸ್’ ಹ್ಯಾಷ್ ಟ್ಯಾಗ್ನೊಂದಿಗೆ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಮುಷ್ಕರ ನಿರತ ರೈತ ಸಂಘಟನೆಗಳೊಂದಿಗೆ ಸರ್ಕಾರ ಈಗಾಗಲೇ 11 ಸುತ್ತು ಮಾತುಕತೆ ನಡೆಸಿದ್ದು, ಫಲಪ್ರದವಾಗಿಲ್ಲ.