ಸರ್ಕಾರಿ ಕಚೇರಿಗಳಲ್ಲಿ ಖಾಸಗಿ ವ್ಯಕ್ತಿಗಳು ಫೋಟೋ/ವಿಡಿಯೋ ನಿಷೇಧ ಆದೇಶ ವಾಪಸ್ -Vishwanews24
ಸರ್ಕಾರಿ ಕಚೇರಿಗಳಲ್ಲಿ ಖಾಸಗಿ ವ್ಯಕ್ತಿಗಳು ಫೋಟೋ/ವಿಡಿಯೋ ನಿಷೇಧ ಆದೇಶ ವಾಪಸ್ -Vishwanews24
ಬೆಂಗಳೂರು :ರಾಜ್ಯದ ಎಲ್ಲಾ ಸರ್ಕಾರಿ ಇಲಾಖೆಗಳ ಕಚೇರಿಗಳಲ್ಲಿ ಪೂರ್ವಾನುಮತಿ ಇಲ್ಲದೆ ಸಾರ್ವಜನಿಕರು ಅನಧಿಕೃತವಾಗಿ ಫೋಟೋ, ವಿಡಿಯೋ ತೆಗೆಯುವುದನ್ನು ನಿಷೇಧಿಸಿ ಆದೇಶ ಹೊರಡಿಸಿದ್ದ ರಾಜ್ಯ ಸರ್ಕಾರ ಇದೀಗ ತನ್ನ ಆದೇಶವನ್ನು ವಾಪಸ್ ಪಡೆದಿದೆ.

ರಾಜ್ಯ ಸರ್ಕಾರಿ ನೌಕರರ ಮನವಿ ಮೇರೆಗೆ ರಾಜ್ಯ ಸರ್ಕಾರವು ಶುಕ್ರವಾರ ಸರ್ಕಾರಿ ಕಚೇರಿಗಳಲ್ಲಿ ಖಾಸಗಿ ವ್ಯಕ್ತಿಗಳು ಫೋಟೋ/ವಿಡಿಯೋ ಚಿತ್ರೀಕರಿಸದಂತೆ ಆದೇಶ ಹೊರಡಿಸಿತ್ತು. ರಾಜ್ಯ ಸರ್ಕಾರದ ಈ ಆದೇಶಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತಡರಾತ್ರಿ ಈ ಆದೇಶವನ್ನು ವಾಪಸ್ ಪಡೆದಿದೆ.
ಈ ಬಗ್ಗೆ ರಾಜ್ಯದ ಸುದ್ದಿ ವಾಹಿನಿ ಸೇರಿದಂತೆ ವಿಶ್ವನ್ಯೂಸ್24 ಕೂಡ ವಿಸ್ತಾರವಾದ ಸುದ್ದಿ ಪ್ರಕಟ ಮಾಡಿ ಆದೇಶ ವಾಪಸ್ ಪಡೆಯುವ ಬಗ್ಗೆ ಸುದ್ದಿ ಬಿತ್ತರಿಸಿತ್ತು.
ಈ ಲಿಂಕ್ ನೋಡಿ
https://fb.watch/ehkY0C1UdK/ https://fb.watch/ehkY0C1UdK/
