ಸರ್ಕಾರಿ ಕಚೇರಿಯಲ್ಲಿ Photo, ವೀಡಿಯೋ ಬಂದ್ ; ಈಗ ಮೊದಲಿನಂತೆ ನಿಯಮ ಇರಲಿದೆ : ಸಿಎಂ ಸ್ಪಷ್ಟನೆ – Vishwanews24

Featured, ರಾಜ್ಯ ನ್ಯೂಸ್

ಸರ್ಕಾರಿ ಕಚೇರಿಯಲ್ಲಿ Photo, ವೀಡಿಯೋ ಬಂದ್ ; ಈಗ ಮೊದಲಿನಂತೆ ನಿಯಮ ಇರಲಿದೆ : ಸಿಎಂ ಸ್ಪಷ್ಟನೆ 

ಬೆಂಗಳೂರು: ಯಾರು ಏನೇ ಹೇಳಲಿ, ಈಗ ಮೊದಲಿನಂತೆ ನಿಯಮ ಇರಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ಕೊಟ್ಟರು.

ಸರ್ಕಾರದ ಯೋಜನೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿನ್ನೆ ಇಡೀ ದಿನ ಪ್ರಮುಖರ ಜೊತೆ ಚಿಂತನಾ ಸಭೆ ಮಾಡಿದ್ದೇವೆ. ಬರುವ ದಿನಗಳಲ್ಲಿ ಸರ್ಕಾರ ಹಾಗೂ ಪಕ್ಷ ಯಾವ ರೀತಿ ಸಮನ್ವಯತೆಯಿಂದ ಹೋಗಬೇಕು ಎಂದು ಚರ್ಚೆಯಾಗಿದೆ. ಸರ್ಕಾರದ ಯೋಜನೆ ಜನರಿಗೆ ತಲುಪಿಸುವ ಬಗ್ಗೆ ಚರ್ಚೆಯಾಗಿದೆ ಎಂದು ವಿವರಿಸಿದರು.

ಸರ್ಕಾರಿ ಕಚೇರಿಯಲ್ಲಿ ವೀಡಿಯೋ ಬಂದ್ ವಿಚಾರವಾಗಿ ಮಾತನಾಡಿದ ಅವರು, ಅದು ನನ್ನ ಗಮನಕ್ಕೆ ಬಂದಿರಲಿಲ್ಲ. ಕೆಲವು ನೌಕರರ ಮನವಿ ಇತ್ತು. ಹೆಣ್ಣು ಮಕ್ಕಳ Photo, ವೀಡಿಯೋ ಎಲ್ಲ ಮಾಡ್ತಾರೆ ಅಂತಿತ್ತು. ಅವರ ಮನವಿ ಒಂದು ಅರ್ಥದಲ್ಲಿ ಸರಿ ಇತ್ತು. ಯಾರು ಏನೇ ಹೇಳಲಿ. ಮೊದಲು ಯಾವ ರೀತಿ ಇತ್ತೋ ಅದೇ ರೀತಿ ನಿಯಮ ಇರಬೇಕು. ಅದಕ್ಕೆ ತಾತ್ವಿಕ ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದರು.

ಉಡುಪಿ: ಆನ್‌ಲೈನ್‌ ಶೂ  ಖರೀದಿ ; ಹಿಂದಿರುಗಿಸಲು ಹೋಗಿ 39,061 ರೂ. ಕಳಕೊಂಡ ವ್ಯಕ್ತಿ – Vishwanews24

 

Leave a Reply