ಸರ್ಜಾ ವಿರುದ್ಧ ಆರೋಪಕ್ಕೆ ತಿರುಗಿಬಿದ್ದ ನಟಿ ..ಫೈರ್ ಸಂಸ್ಥೆಗೆ ರಾಜೀನಾಮೆ ನೀಡಿದ ಪ್ರಿಯಾಂಕಾ ಉಪೇಂದ್ರ

Featured, ಸಿನಿಮಾ

ಬೆಂಗಳೂರು : ನಟಿ ಪ್ರಿಯಾಂಕಾ ಉಪೇಂದ್ರ ಫೈರ್​ (FIRE) ಸಂಸ್ಥೆಯಿಂದ ಹೊರ ಬಂದಿದ್ದಾರೆ. ಈ ಸಂಸ್ಥೆಯಲ್ಲಿ ಅಧ್ಯಕ್ಷೆಯಾಗರಾಗಿದ್ದ ಪ್ರಿಯಾಂಕ ಉಪೇಂದ್ರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಶ್ರುತಿ ಹರಿಹರನ್, ನಟ ಅರ್ಜುನ್​ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ನಂತರ ಈ ‘ಫೈರ್​’ ಸಂಸ್ಥೆಯಲ್ಲಿ ಸದ್ಯ ಇವರ ರಾಜೀನಾಮೆಯನ್ನು ನೀಡಿರುವ ಹಿನ್ನಲೆಯಲ್ಲಿ ಸಾಕಷ್ಟು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

ಫೈರ್​ (FIRE) ಸಂಸ್ಥೆಯಿಂದ ಹೊರ ಬಂದ ನಂತರ ನಟಿ ಪ್ರಿಯಾಂಕಾ ಉಪೇಂದ್ರ ಮಾತನಾಡಿ ಸಂಸ್ಥೆಯ ಉದ್ದೇಶವೇ ಹಾದಿ ತಪ್ಪುತ್ತಿದೆ, ಫೈಯರ್ ಸಂಸ್ಥೆಯ ಸದಸ್ಯರ ಸಿದ್ಧಾಂತಗಳಿಗೂ ನನ್ನ ಸಿದ್ಧಾಂತಕ್ಕೂ ಹೊಂದಾಣಿಕೆ ಆಗಲಿಲ್ಲ. ಶ್ರುತಿ ಹರಿಹರನ್ #MeToo ಪ್ರಕರಣವನ್ನ ಬೇರೆ ರೀತಿಯಲ್ಲೇ ಬಗೆಹರಿಸಬಹುದಿತ್ತು.

ಅದನ್ನು ಈರೀತಿಯಾಗಿ ಹಾದಿರಂಪ ಬೀದಿರಂಪ ಮಾಡದೆ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳ ಬಹುದ್ದಿತ್ತು ಆದರೆ ಇದು ಫೈರ್ ಸಂಸ್ಥೆಯ ಉದ್ದೇಶವೇ ಅಲ್ಲ. ಎಲ್ಲವನ್ನೂ ಗುಟ್ಟಾಗಿ ಪರಿಹರಿಸುವ ಪರಿಕಲ್ಪನೆಯೊಂದಿಗೆ ಈ ಸಂಸ್ಥೆ ರೂಪುಗೊಂಡಿತ್ತು. ಆದರೆ ಎಲ್ಲೋ ಒಂದು ಕಡೆ ಉದ್ದೇಶ ದಾರಿ ತಪ್ಪುತ್ತಿದೆ ಎಂದು ಅನಿಸಿದಾಗ ಹೊರ ಬಂದೆ ಎಂದು ಪ್ರಿಯಾಂಕ ಹೇಳಿದರು ಚಿತ್ರರಂಗದಲ್ಲಿ ಹೆಣ್ಣು ಮಕ್ಕಳಿಗೆ ಸಹಾಯ ಮಾಡುವ ಹಾಗೂ ಅವರ ಮೇಲಾಗುವ ಲೈಂಗಿಕ ದೌರ್ಜನ್ಯವನ್ನು ತಡೆಯುವ ಉದ್ದೇಶದಿಂದಲೇ ಫೈರ್ ಸಂಸ್ಥೆಯನ್ನು ಹುಟ್ಟುಹಾಕಲಾಗಿತ್ತು’ ಎಂದು ಹೇಳಿದರು.