ಸಹಕಾರ ಭಾರತಿ ಹಾಲು ಪ್ರಕೋಷ್ಠ ರಾಜ್ಯ ಸಂಚಾಲಕ ಭೋಳ ಸದಾಶಿವ ಶೆಟ್ಟಿಯ ಅಧಿಕಾರ ದುರುಪಯೋಗದ ಹಿನ್ನೆಲೆ ಅನರ್ಹ ಗೊಳಿಸಿ ಆದೇಶ : vishwanews24

Featured, ಉಡುಪಿ

ಸಹಕಾರ ಭಾರತಿ ಹಾಲು ಪ್ರಕೋಷ್ಠ ರಾಜ್ಯ ಸಂಚಾಲಕ ಭೋಳ ಸದಾಶಿವ ಶೆಟ್ಟಿಯ ಅಧಿಕಾರ ದುರುಪಯೋಗದ ಹಿನ್ನೆಲೆ ಅನರ್ಹ ಗೊಳಿಸಿ ಆದೇಶ : vishwanews24

ಉಡುಪಿ: ಬೋಳ ವ್ಯವಸಾಯ ಸೇವಾ ಸಹಕಾರಿ ಸಂಘ (ರಿ) ಬೋಳ ಇದರ ಅಧ್ಯಕ್ಷರಾದ ಬಿ. ಸದಾಶಿವ ಶೆಟ್ಟಿ ಇವರನ್ನು ಸಂಘದ ಅಧ್ಯಕ್ಷ ಹಾಗೂ ನಿರ್ದೇಶಕ ಸ್ಥಾನದಿಂದ ಅನರ್ಹಗೊಳಿಸಿ ಆದೇಶ ನೀಡಿರುತ್ತಾರೆ.

ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಕುಂದಾಪುರ ಉಪವಿಭಾಗ, ಕುಂದಾಪುರ ಇವರ ಕಛೇರಿ ನಡವಳಿಯಂತೆ ಬೋಳ ಬಿ.ಸದಾಶಿವ ಶೆಟ್ಟಿ ಇವರನ್ನು ಕರ್ನಾಟಕ ಸಹಕಾರಿ ಸಂಘಗಳ ಅಧಿನಿಯಮ 1959 ರ ಪ್ರಕರಣ 29ಸಿ(8)(ಬಿ) ರೀತ್ಯಾ ಅನರ್ಹತೆಗೆ ಒಳಗಾಗಿರುವುದರಿಂದ ಕಾಯ್ದ ಕಲಂ 29ಸಿ(8) (ಡಿ) ಪ್ರಕರ ಮಂಡಲಿ ಸದಸ್ಯತ್ವದಿಂದ ಅನರ್ಹಗೊಳಿಸಿ ವಜಾ ಮಾಡಿರುತ್ತಾರೆ ಮತ್ತು ಕಲಂ 292 (10) ರ ಪ್ರಕಾರ ಈ ಸಂಘಕ್ಕೆ ಮತ್ತು ಇನ್ನಾವುದೇ ಸಹಕಾರಿ ಸಂಘದಲ್ಲಿ ಮುಂದಿನ 5 ವರ್ಷಗಳ ಅವಧಿಗೆ ಚುನಾವಣೆಯಲ್ಲಿ ಆಯ್ಕೆಯಾಗಲು ಅಥವಾ ನೇಮಕವಾಗಲು ಅನರ್ಹಗೊಳಿಸಿ ಆದೇಶಿಸಲಾಗಿದೆ ಎಂದು ಈ ಮೂಲಕ ತಿಳಿಸುತ್ತಿದ್ದೇವೆ.

ಎಂದು ಸಂಘದ ನಿರ್ದೇಶಕರಾದ ಕೆ.ಮುರಳೀಧರ ಶರ್ಮ ಸೂರ್ಯಕಾಂತ್ ಶೆಟ್ಟಿ,ಜಯರಾಮ ಸಾಲ್ಯಾನ್,ಪ್ರವೀಣ್ ಸಾಲ್ಯಾನ್,ಗಣಪತಿ ಭಟ್,ದಿವ್ಯಾ ನಾಯಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಅಧಿಕಾರ ದುರುಪಯೋಗ ,ಸರ್ವಾಧಿಕಾರ ಧೋರಣೆ ,ಸಹಕಾರಿ ಕಾನೂನಿಗೆ ವಿರುದ್ಧವಾಗಿ ವ್ಯವಹರಿಸಿರುವುದು,ಹಣದ ದುರುಪಯೋಗ ಈ ಎಲ್ಲಾ ಕಾರಣಗಳಿಗೆ ಅನರ್ಹಗೊಳಿಸಲಾಗಿದೆ ಎಂದು ತಿಳಿಸಿರುತ್ತಾರೆ.

Leave a Reply