ಸಾಡೇಸಾತಿ ಶನಿದೋಷ : ಪರಿಹಾರಗಳು -Vishwanews24
ಸಾಡೇಸಾತಿ ಶನಿದೋಷ : ಪರಿಹಾರಗಳು -Vishwanews24
ಗ್ರಹಗಳ ದೋಷ ಅಥವಾ ಅನಾನುಕೂಲಕವಾಗಿದ್ದರೆ ಪ್ರತಿಯೊಂದು ಕೆಲಸ ಕಾರ್ಯಗಳಲ್ಲೂ ಅಡೆತಡೆಗಳನ್ನು ಅನುಭವಿಸಬೇಕಾಗುವುದು. ಹಾಗಾಗಿ ಯಾವ ಗ್ರಹಗಳು ನೀಚ ಯಾವ ಗ್ರಹಗಳು ಉತ್ತಮ ಎಂದು ನಿಖರವಾಗಿ ಪರಿಗಣಿಸಲು ಸಾಧ್ಯವಿಲ್ಲ.
ಶನಿಯ ಸ್ಥಾನ ಉತ್ತಮವಾಗಿದ್ದರೆ ವ್ಯಕ್ತಿ ಜೀವನದಲ್ಲಿ ಸಾಕಷ್ಟು ಖ್ಯಾತಿ, ಸಂತೋಷ ಹಾಗೂ ಉತ್ತಮ ಸ್ಥಾನವನ್ನು ಪಡೆದುಕೊಳ್ಳುವನು. ಶನಿಗೆ ಸಂಬಂಧಿಸಿದಂತೆ ವ್ಯಕ್ತಿ ಜೀವನದಲ್ಲಿ ಶನಿ ದೆಸೆ, ಸಾಡೇ ಸಾತಿ, ಪಂಚಮ ಶನಿ, ಅಷ್ಟಮ ಶನಿ, ಶನಿಯ ವಕ್ರದೃಷ್ಟಿ ಸೇರಿದಂತೆ ಇನ್ನಿತರ ಸಂಧಿ ಕಾಲಗಳನ್ನು ಅನುಭವಿಸಬೇಕಾಗುವುದು.
ಖ್ಯಾತ ಮಹಾಮಾಂತ್ರಿಕ ಜೋತಿಷ್ಯರು : ಪಂಡಿತ್ ಶೇಷಗಿರಿ ಭಟ್ 9482206681
ಸಾಡೇ ಸಾತಿ ಸಮಯದಲ್ಲಿ ವ್ಯಕ್ತಿಯ ಸ್ಥಿತಿ
ಶನಿಯು ಒಳ್ಳೆಯ ಕರ್ಮವನ್ನು ಮಾಡಿದವರಿಗೆ ಒಳ್ಳೆಯ ಪ್ರಭಾವ ಬೀರುತ್ತಾನೆ ಎಂದು ಹೇಳಲಾಗುವುದು. ವ್ಯಕ್ತಿಯ ಜನ್ಮ ರಾಶಿಯಿಂದ ಶನಿಯು ಹನ್ನೇರಡನೇ ಮನೆ, ಮೊದಲ ಮನೆ ಹಾಗೂ ಎರಡನೇ ಮನೆಯಲ್ಲಿ ಇದ್ದರೆ ಶನಿಯ ಪ್ರಭಾವಕ್ಕೆ ಒಳಗಾಗುತ್ತಾರೆ. ಸಾಡೇ ಸಾತಿ ಶನಿಯು ತಲಾ ಎರಡೂವರೆ ವರ್ಷಗಳ ವಿಂಗಡನೆಯ ಮೂಲಕ ಮೂರು ಸಮಾನ ಭಾಗವಾಗಿ ವಿಂಗಡಿಸಲಾಗುತ್ತದೆ. ಒಟ್ಟು ಏಳುವರೇ ವರ್ಷಗಳ ಕಾಲ ಶನಿಯು ಆಳುವನು. ಈ ಮೂರು ಹಂತಗಳಲ್ಲೂ ಶನಿಯು ವಿಭಿನ್ನವಾದ ಪ್ರಭಾವ ಬೀರುವನು. ಎರಡನೇ ಹಂತದಲ್ಲಿ ವ್ಯಕ್ತಿಗೆ ಹೆಚ್ಚಿನ ಪರೀಕ್ಷೆ ನಡೆಯುವುದು ಎಂದು ಹೇಳಲಾಗುತ್ತದೆ.
ಸಾಡೇ ಸಾತಿಯ ಕುರಿತಾಗಿರುವ ಭಯ
ಸಾಡೇ ಸಾತಿ ಎಂದರೆ ಜನರು ಭಯ ಭೀತರಾಗುತ್ತಾರೆ. ಸಾಡೇ ಸಾತಿಯ ಸಮಯದಲ್ಲಿ ಜನರು ಸಾಕಷ್ಟು ಸಮಸ್ಯೆ ಹಾಗೂ ಕಷ್ಟಗಳನ್ನು ಎದುರಿಸಬೇಕಾಗುವುದು. ಇದು ತಮ್ಮ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ತರುವುದು ಎಂದು ಭಯ ಭೀತರಾಗಿರುತ್ತಾರೆ. ಶನಿಯು ಕೇವಲ ಕೆಟ್ಟದ್ದನ್ನೇ ಮಾಡುವುದಿಲ್ಲ. ಕರ್ಮ ಫಲಗಳು ಉತ್ತಮವಾಗಿದ್ದರೆ ಒಳ್ಳೆಯ ಪ್ರಭಾವ ಬೀರುವನು. ಯಾರಿಗೂ ತೊಂದರೆ ನೀಡದ, ಮೋಸ ಮಾಡದ ಪ್ರಾಮಾಣಿಕ ವ್ಯಕ್ತಿಗಳಿಗೆ ಶನಿಯು ಯಾವುದೇ ಅಡೆತಡೆಯನ್ನು ಉಂಟುಮಾಡನು. ಬದಲಿಗೆ ಜೀವನದಲ್ಲಿ ಉತ್ತುಂಗದ ಸ್ಥಾನ ಪಡೆದುಕೊಳ್ಳಲು ಸಹಾಯ ಮಾಡುವನು.
ಪರಿಹಾರ ಕ್ರಮಗಳು
ನಾವು ತಪ್ಪುಗಳನ್ನು ಮಾಡಿದ್ದರೆ ಹಾಗೂ ಸಾಡೇ ಸಾತಿ ಶನಿಯ ಕಾಲವನ್ನು ಎದುರಿಸುತ್ತಿದ್ದರೆ ಕೆಲವು ಧಾರ್ಮಿಕ ರೂಪದಲ್ಲಿ ಪರಿಹಾರ ಕ್ರಮವನ್ನು ಕೈಗೊಳ್ಳಬಹುದು. ಆಗ ಶನಿಯು ಆಶೀರ್ವದಿಸುವನು ಎಂದು ಹೇಳಲಾಗುತ್ತದೆ. ಶನಿಯ ಕೆಟ್ಟ ದೃಷ್ಟಿ ಹಾಗೂ ಪ್ರಭಾವದಿಂದ ಪಾರಾಗಲು ಶನಿಯ ಮಂತ್ರವನ್ನು ನಿಯಮಿತವಾಗಿ ಪಠಿಸಬೇಕು.
ಶನಿಯ ಮೂಲ ಮಂತ್ರವಾದ “ಓಂ ಶಾನ್ ಶನೈಶ್ಚರಾಯ ನಮಃ” ಅನ್ನು ಪಠಿಸಬೇಕು.ನವಗ್ರಹ ಸ್ತೋತ್ರದ ಶನಿಯ ಮಂತ್ರವಾದ “ನೀಲಾಂಜನ ಸಮಾಭಾಸಂ ರವಿ ಪುತ್ರಮ್ ಯಮಾಗ್ರಜಂ,ಛಾಯಾ ಮಾರ್ತಾಂಡ ಸಂಭೂತಮ್ ತಮ್ ನಮಾಮಿ ಶನೈಶ್ಚರಂ.” ಅನ್ನು ಪಠಿಸಬೇಕು.
ನಿತ್ಯವೂ ಶನಿ ಚಾಲಿಸಾವನ್ನು ಪೂರ್ಣ ನಂಬಿಕೆಯಿಂದ ಮತ್ತು ಭಕ್ತಿಯಿಂದ ಪಠಿಸಬೇಕು.
ಪ್ರತಿ ಶನಿವಾರ ಉದ್ದಿನ ಬೇಳೆ ಸೇವಿಸಿ, ಅರ್ಧ ದಿನ ಉಪವಾಸ ಕ್ರಮವನ್ನು ಕೈಗೊಳ್ಳಬೇಕು.
ಪ್ರತಿ ಶನಿವಾರ ಶನಿದೇವನಿಗೆ ಎಣ್ಣೆಯ ಅಭಿಷೇಕ ಮಾಡಿಸಿ.
ಶನಿವಾರ ಉದ್ದಿನ ಬೇಳೆ, ಜಿಲೇಬಿ, ಕಚೋರಿ ಸೇರಿದಂತೆ ಇನ್ನಿತರ ಆಹಾರ ಪದಾರ್ಥಗಳನ್ನು ಬಡವರಿಗೆ ಹಾಗೂ ಅಂಗವಿಕಲರಿಗೆ ದಾನ ಮಾಡಬೇಕು. ಆಗ ಶನಿ ದೇವನ ಅನುಗ್ರಹ ದೊರೆಯುವುದು.
ಶನಿ ದೇವನಿಗೆ ಎಕ್ಕದ ಹೂವನ್ನು ಅರ್ಪಿಸಿ
ಪ್ರತಿ ಶನಿವಾರ ಎಕ್ಕದ ಹೂವಿನ ಮಾಲೆಯನ್ನು ಶನಿ ದೇವನಿಗೆ ಅರ್ಪಿಸಬೇಕು. ಎಣ್ಣೆಯ ಅಭಿಷೇಕ ಹಾಗೂ ಸಿಂಧೂರದ ಅಲಂಕಾರ ಮಾಡಿಸುವುದರಿಂದ ಶನಿಯು ಪ್ರಸನ್ನನಾಗುವನು. ಅಂದು ಕಪ್ಪು ಎಳ್ಳಿನ ಉಂಡೆಯನ್ನು ನೈವೇದ್ಯವನ್ನಾಗಿ ಇಟ್ಟು, ನಂತರ ಮಕ್ಕಳಿಗೆ ನೀಡಿ. ಈ ಕ್ರಮವು ಅತ್ಯಂತ ಶುಭವನ್ನು ನೀಡುವುದು.
ಶನಿ ದೇವನಿಗೆ ಪ್ರಾರ್ಥನೆ
ಹನುಮಾನ್ ಜಯಂತಿ ಹಾಗೂ ಶನಿವಾರದಂದು ಶನಿ ದೇವನಿಗೆ ವಿಶೇಷ ಮಂತ್ರಗಳಿಂದ ಪೂಜೆ ಮಾಡಬೇಕು. ಅಂದು ಶನಿಗೆ ಎಳ್ಳೆಣ್ಣೆ ಅಥವಾ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿ, ಸುಂದರಕಾಂಡ ಅಥವಾ ಹನುಮಾನ್ ಚಾಲೀಸ ಪಠಿಸಿದರೆ ಉತ್ತಮ ಫಲ ದೊರೆಯುವುದು. ಪ್ರಾರ್ಥನೆ ಅಥವಾ ಮಂತ್ರವನ್ನು ಪಠಿಸುವಾಗ ಉತ್ತರ ದಿಕ್ಕಿಗೆ ಮುಖ ಮಾಡಿರಬೇಕು. ಇದರಿಂದ ನಾವು ಮಾಡುವ ಸೇವೆಯು ಬಹುಬೇಗ ಶನಿಗೆ ತಲುಪುವುದು ಎನ್ನುವ ನಂಬಿಕೆಯಿದೆ.
ಶ್ರೀ ವೈಷ್ಣವಿ ಜ್ಯೋತಿಷ್ಯ ಕೇಂದ್ರ
ಜಾತಕ ವಿಮರ್ಶಕರು : ಕೇರಳ ರಕ್ತೇಶ್ವರಿ ಆರಾಧಕರು
ಖ್ಯಾತ ಮಹಾಮಾಂತ್ರಿಕ ಜೋತಿಷ್ಯರು : ಪಂಡಿತ್ ಶೇಷಗಿರಿ ಭಟ್ 9482206681
ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು ,ನಿ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಪ್ರೇಮ ವಿಚಾರ, ಶತ್ರುಬಾಧೆ, ಮಾಂತ್ರಿಕ ಸಮಸ್ಯೆ, ದೇಹಾರೋಗ್ಯ, ಸಾಲಬಾದೆ ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಕೇರಳದ ಬಲಿಷ್ಠ ಪೂಜಾ ಗುಪ್ತ ಮಂತ್ರ ಶಕ್ತಿಗಳಿಂದ ಅತಿ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು.
