ಸಾಯಿ ಈಶ್ವರ್ ಗುರೂಜಿ ಸಂಕಲ್ಪದಲ್ಲಿ ” ಏಕ ಜಾತಿ ಧರ್ಮ ಪೀಠ” ಸ್ಥಾಪನೆ : vishwanews24
ಸಾಯಿ ಈಶ್ವರ್ ಗುರೂಜಿ ಸಂಕಲ್ಪದಲ್ಲಿ ” ಏಕ ಜಾತಿ ಧರ್ಮ ಪೀಠ” ಸ್ಥಾಪನೆ
ಮಕರಸಂಕ್ರಾತಿ ದಿನದಂದು ಸ್ಥಾಪನೆಗೊಳ್ಳಲಿರುವ ಧರ್ಮ ಪೀಠ
ಕಟಪಾಡಿ: ದ್ವಾರಕಮಾಯಿ ಮಠ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನ ಶಂಕರಪುರ ಇಲ್ಲಿನ ಧರ್ಮಧರ್ಶಿಗಳಾದ ಸಾಯಿ ಈಶ್ವರ್ ಗುರೂಜಿಯ ಸಂಕಲ್ಪದಂತೆ ಏಕ ಜಾತಿ ಧರ್ಮ ಪೀಠ ಸ್ಥಾಪನೆಯಾಗಲಿದೆಂದು ದೇವಸ್ಥಾನದ ಪ್ರಕಟನೆ ತಿಳಿಸಿದೆ.

ಮಕರ ಸಂಕ್ರಮಣದ ದಿನವಾದ ಶನಿವಾರ (ನಾಳೆ) ಬ್ರಾಹ್ಮೀ ಮೂಹೂರ್ತ 3.59 ಕ್ಕೆ ಸರಿಯಾಗಿ ಧರ್ಮ ಪೀಠ ಸ್ಥಾಪನೆಯಾಗಲಿದ್ದು ಬೆಳಗ್ಗಿನ ಮಹಾಪೂಜೆಯಾದ ನಂತರ 9.30 ಕ್ಕೆ ಸರಿಯಾಗಿ ಸಮಾಜದ ವಿವಿಧ ಜಾತಿ ಬಾಂಧವರಿಂದ ಏಕ ಜಾತಿ ಧರ್ಮ ಜ್ಯೋತಿ ಬೆಳಗಿಸುವ ಮುಖೇನ ಧರ್ಮ ಪೀಠ ಸ್ಥಾಪನೆಗೊಂಡು ಕಾರ್ಯರಂಭ ಮಾಡಲಿದೆ.

ಈಗಾಗಲೇ ನೂರಾರು ಧರ್ಮ ಕಾರ್ಯ-ಸಾಮಾಜಿಕ ಕಾರ್ಯ ಮಾಡಿರುವ ಧರ್ಮಧರ್ಶಿಗಳಾದ ಸಾಯಿ ಈಶ್ವರ್ ಗುರೂಜಿಯು ಜಾತಿ ವ್ಯವಸ್ಥೆಯು ಮನೆಯೊಳಗೆ ಸೀಮಿಗೊಂಡು ಹಿಂದೂ ಸಮಾಜದ ಒಗ್ಗಟಿಗೆ ಜಾತಿಯ ಹೆಸರಿನಲ್ಲಿ ಬಿರುಕುಬಾರದೇ ಧರ್ಮದ ವಿಚಾರದಲ್ಲಿ ಎಲ್ಲಾರೂ ಒಂದೇ ಎಂಬ ವಿಚಾರದಡಿಯಲ್ಲಿ ಈ ಪೀಠ ಸ್ಥಾಪನೆಗೆ ಮುಂದಾಗಿದ್ದಾರೆ.

