ಸಾಸ್ ಕಾಪು ವಲಯದ ವತಿಯಿಂದ ಗೆಳೆಯರೆ ಶಾಲೆಗೆ ಹೊರಡೋಣ ಬನ್ನಿ ಕಾರ್ಯಕ್ರಮ : VISHWA NEWS 24
ಸಾಸ್ ಕಾಪು ವಲಯದ ವತಿಯಿಂದ ಗೆಳೆಯರೆ ಶಾಲೆಗೆ ಹೊರಡೋಣ ಬನ್ನಿ ಕಾರ್ಯಕ್ರಮ : VISHWA NEWS 24
ಕಾಪು: ಶಬರಿಮಲೆ ಅಯ್ಯಪ್ಪ ಸೇವಾ ಸಮಾಜ(ಸಾಸ್) ಕಾಪು ವಲಯದ ವತಿಯಿಂದ ದಿನಾಂಕ 25.10.2021 ಸೋಮವಾರ ಬೆಳಿಗ್ಗೆ 9 ಘಂಟೆ ಗೆ ಸರಿಯಾಗಿ ಕಾಪು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ಗೆಳೆಯರೆ ಶಾಲೆಗೆ ಹೊರಡೋಣ ಬನ್ನಿ”” ಎಂಬ ಶೀರ್ಷಿಕೆಯಡಿ ಒಂದರಿಂದ ಐದನೇ ತರಗತಿಯ ಮಕ್ಕಳನ್ನ ಶಾಲೆಗೆ ಸ್ವಾಗತಿಸುವ ಕಾರ್ಯಕ್ರಮ ಜರಗಿತು.
ಮುಖ್ಯ ಅತಿಥಿಗಳಾಗಿ ಸಾಸ್ ಜಿಲ್ಲಾಧ್ಯಕ್ಷರಾದ ರಾಧಾಕೃಷ್ಣಮೆಂಡನ್ ,ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ , ಸಮಾಜ ಸೇವಕ ಸುರೇಶ್ ಶೆಟ್ಟಿ ಗುರ್ಮೆ, ಕಾಪು ಪೊಲೀಸ್ ವೃತ್ತ ನಿರೀಕ್ಷಕ ಪ್ರಕಾಶ್, ಕಾಪು ಪುರಸಭೆ ನಿಕಟಪೂರ್ವ ಅಧ್ಯಕ್ಷ ಅನಿಲ್ ಕುಮಾರ್, ಯೋಗೀಶ್ ಶೆಟ್ಟಿ ಬಾಲಾಜಿ, ಅಯೋಧ್ಯ ಸುರೇಶ್ ಆರ್ ಶೆಟ್ಟಿ,ಸಾಸ್ ಕಾಪು ಸಂಚಾಲಕ ದಿವಾಕರ್ ಶೆಟ್ಟಿ ಕಾಪು,ರಘರಾಮ್ ಮಲ್ಲಾರ್, ಮೋಹನ್ ಬಂಗೇರ ,ಗಿರೀಶ್ ಪಾತ್ರಿ,ಕಾಪು ಹರೀಶ್ ನಾಯಕ್ ಮೊದಲಾದವರು ಉಪಸ್ಥಿತಿತರಿದ್ದರು.
