ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ಶರಣಾಗಲಿರುವ ನಕ್ಸಲರು – vishwanews24
ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ಶರಣಾಗಲಿರುವ ನಕ್ಸಲರು
ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲಾಡಳಿತ ಮುಂದೆ ಶರಣಾಗಬೇಕಿದ್ದ ಆರು ಮಂದಿ ನಕ್ಸಲರು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಶರಣಾಗತರಾಗಲಿದ್ದಾರೆ.
ಆರು ಜನ ನಕ್ಸಲರ ಪೋಷಕರು ಚಿಕ್ಕಮಗಳೂರು ಜಿಲ್ಲಾಡಳಿದ ಮುಂದೆ ತಮ್ಮವರನ್ನು ನೋಡಲು ಕಾತುರದಿಂದ ಕಾದಿದ್ದರು. ಆದರೆ, ದಿಢೀರ್ ಬದಲಾವಣೆ ಗೊಂಡಿದ್ದು, ಪೋಷಕರನ್ನು ಬೆಂಗಳೂರಿಗೆ ಕಳಿಸಲು ವಾಹನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಯುವತಿಯ ಅತ್ಯಾಚಾರ: ಬಿಜೆಪಿ ಮುಖಂಡನ ವಿರುದ್ದ FIR , ತಲೆಮರೆಸಿಕೊಂಡ ಆರೋಪಿ ಜಿಮ್ ಸೋಮ – vishwanews24
ಇಂದು ಮಧ್ಯಾಹ್ನ ಅಥವಾ ಸಂಜೆ ವೇಳೆಗೆ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಶರಣಾಗಲಿದ್ದಾರೆ. ಬೆಂಗಳೂರಿಗೆ ತೆರಳುವ ವಿಚಾರವನ್ನು ಶಾಂತಿಗಾಗಿ ನಾಗರಿಕ ವೇದಿಕೆ ಮುಖಂಡ ಕೆ.ಎಲ್.ಅಶೋಕ್ ತಿಳಿಸಿದ್ದಾರೆ.
