ಸಿಡಿ ಪ್ರಕರಣ : ನನ್ನನ್ನು ‘ಹನಿಟ್ರ್ಯಾಪ್’ಗೆ ಬಳಿಸಿಕೊಂಡಿದ್ದರು ; ಅಧಿಕಾರಿಗಳ ಮುಂದೆ ಸಿಡಿ ಯುವತಿ ! Vishwanews24
ಸಿಡಿ ಪ್ರಕರಣ : ನನ್ನನ್ನು ನರೇಶ್ ಮತ್ತು ಶ್ರವಣ್ ‘ಹನಿಟ್ರ್ಯಾಪ್’ಗೆ ಬಳಿಸಿಕೊಂಡಿದ್ದರು ; ಅಧಿಕಾರಿಗಳ ಮುಂದೆ ಸಿಡಿ ಯುವತಿ ! Vishwanews24
ರಮೇಶ್ ಜಾರಕಿಹೊಳಿ ವಿರುದ್ಧವಾಗಿ ನನ್ನ ಹೇಳಿಕೆ ಸತ್ಯವಾದುದ್ದಲ್ಲ..
ಬೆಂಗಳೂರು : ಸಿಡಿ ಲೇಡಿ ಪ್ರಕರಣಕ್ಕೆ ದೊಡ್ಡ ಮಟ್ಟದ ತಿರುವು ಸಿಕ್ಕಿದ್ದು, ನನ್ನನ್ನು ಹನಿ ಟ್ರ್ಯಾಪ್ ಗೆ ಬಳಿಸಿಕೊಂಡು ಕೃತ್ಯ ಎಸಗಿದ್ದಾರೆ ಎಂದು ನರೇಶ್ ಮತ್ತು ಶ್ರವಣ್ ವಿರುದ್ಧ ಸಿಡಿ ಪ್ರಕರಣದ ಯುವತಿ ಆರೋಪ ಮಾಡಿದ್ದಾರೆ. ನನ್ನನ್ನು ಹನಿಟ್ರ್ಯಾಪ್ ಗೆ ಬಳಸಿಕೊಂಡಿದ್ದೇ ನರೇಶ್ ಮತ್ತು ಶ್ರವಣ್ ಎಂದು ನೇರವಾಗಿ ಎಸ್ ಐಟಿ ಮುಂದೆ ಯುವತಿ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ
ಎಸ್ಐಟಿ ತನಿಖಾಧಿಕಾರಿ ಕವಿತಾ ಮುಂದೆ ಸಿಡಿ ಯುವತಿ ಈ ರೀತಿ ಹೇಳಿಕೆ ನೀಡಿರುವುದು ದೊಡ್ಡ ಸಂಚಲನಕ್ಕೆ ಕಾರಣವಾಗಿದೆ. ಸದ್ಯ ಯುವತಿ ಹೇಳಿಕೆಯನ್ನು ರೆಕಾರ್ಡ್ ಮಾಡಲಾಗಿದೆ.
ಮಂಗಳೂರು: ನಗರದಲ್ಲಿ ಹೆದ್ದಾರಿ ದರೋಡೆಗೆ ಸಂಚು ರೂಪಿಸುತ್ತಿದ್ದ 8 ಮಂದಿ ಆರೋಪಿಗಳು ಪೊಲೀಸರ ವಶಕ್ಕೆ -Vishwanews24
ಯುವತಿಯು SITಗೆ ನೀಡಿರುವ ಆರೋಪದಲ್ಲಿ ಏನಿದೆ :
ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧವಾಗಿ ನನ್ನ ಹೇಳಿಕೆ ಪೂರ್ಣ ಪ್ರಮಾಣದ ಸತ್ಯ ಅಲ್ಲ. ನರೇಶ್ ಹಾಗೂ ಶ್ರವಣ್ ನನ್ನನ್ನು ಹನಿಟ್ರ್ಯಾಪ್ ಗೆ ಬಳಸಿಕೊಂಡರು. ಈ ಕಾರಣಕ್ಕಾಗಿ ಅವರು ಹೇಳಿದಂತೆ ನಾನು ಕೇಳಿದೆ. ಅವರು ಒತ್ತಡ ನೀಡಿದ ಕಾರಣ ನಾನು ಆ ರೀತಿ ಹೇಳಿಕೆ ಕೊಟ್ಟಿದ್ದೆ ಎಂದು ತನಿಖಾಧಿಕಾರಿ ಕವಿತಾ ಮುಂದೆ ಸಿಡಿ ಲೇಡಿ ಹೇಳಿಕೆ ನೀಡಿದ್ದಾರೆ.
