ಸಿಡಿ ಪ್ರಕರಣ : ಸಂತ್ರಸ್ತೆ ಬಂದು ದೂರು ನೀಡುವವರೆಗೂ ಯಾರನ್ನೂ ಬಂಧಿಸಲು ಆಗಲ್ಲ: ಪ್ರಹ್ಲಾದ್ ಜೋಶಿ -Vishwanews24
ಸಿಡಿ ಪ್ರಕರಣ : ಸಂತ್ರಸ್ತೆ ಬಂದು ದೂರು ನೀಡುವವರೆಗೂ ಯಾರನ್ನೂ ಬಂಧಿಸಲು ಆಗಲ್ಲ: ಪ್ರಹ್ಲಾದ್ ಜೋಶಿ -Vishwanews24
ದೇವನಹಳ್ಳಿ : ಸಿಡಿ ಪ್ರಕರಣದಲ್ಲಿ ಸಂತ್ರಸ್ತೆ ಬಂದು ದೂರು ಕೊಡುವವರೆಗೂ ಯಾರನ್ನೂ ಬಂಧಿಸಲು ಆಗುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಬೊಮ್ಮಾಯಿಯವರೇ ಸಿಡಿ ಆರೋಪಿಯನ್ನು ಬಂಧಿಸದೆ, ಯುವತಿ ಕುಟುಂಬಕ್ಕೆ ರಕ್ಷಣೆ ನೀಡದೇ ಏನು ಮಾಡಲು ಹೊರಟಿದ್ದೀರಿ? ಕಾಂಗ್ರೆಸ್ ಪ್ರಶ್ನೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರವು ಪ್ರಕರಣದಲ್ಲಿ ಯಾರನ್ನು ಬಂಧಿಸಬೇಕು, ಯಾರನ್ನು ಬಿಡಬೇಕು ಎಂದು ಎಸ್ ಐಟಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದೆ. ಗೃಹ ಮಂತ್ರಿಗಳ ಜೊತೆಗೆ ಚರ್ಚೆ ಮಾಡಿದ್ದೇನೆ. ಈ ತರಹದ ವಿಷಯಗಳಿಗೆ ಪೊಲೀಸರು ತನಿಖೆಗೆ ಸಹಕಾರ ಕೊಡೊದು ಎಲ್ಲರ ಕರ್ತವ್ಯ ಎಂದು ಹೇಳಿದರು.
ಇದನ್ನೂ ಓದಿ : ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ನಡೆದ ಆಯನೋತ್ಸವ ಹಾಗೂ ಸಿರಿ ಜಾತ್ರಾ ಮಹೋತ್ಸವ -Vishwanews24
ಪ್ರಕರಣಕ್ಕೆ ಸಂಬಂಧಿಸಿದವರು ಬಂದು ದೂರು ನೀಡುವವರೆಗೂ ಯಾರನ್ನು ಬಂಧಿಸಲು ಆಗುವುದಿಲ್ಲ. ಇದರಲ್ಲಿ ಡಿ.ಕೆ. ಶಿವಕುಮಾರ್ ಹೆಸರೂ ತಳಕು ಹಾಕಿಕೊಂಡಿದೆ. ಆದರೆ ಎಸ್ ಐಟಿ ಯಾರನ್ನೂ ಬಂಧಿಸಿಲ್ಲ ವಿಚಾರಣೆ ಮಾಡುತ್ತಿದೆ. ತನಿಖೆಗೂ ಮೊದಲೇ ಬಂಧಿಸಲು ಒತ್ತಾಯಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.
