ಸಿಬ್ಬಂದಿ ಶೋಷಣೆ ಆರೋಪ: ಹಿಂದೂಜಾ ಕುಟುಂಬದ ನಾಲ್ವರು ಸದಸ್ಯರಿಗೆ ಜೈಲು ಶಿಕ್ಷೆ ; ಸ್ವಿಡ್ಜರ್ಲೆಂಡ್ ನ್ಯಾಯಾಲಯದಿಂದ ಮಹತ್ವದ ತೀರ್ಪು – vishwanews24
ಸಿಬ್ಬಂದಿ ಶೋಷಣೆ ಆರೋಪ: ಹಿಂದೂಜಾ ಕಂಪನಿ ಮಾಲೀಕರಿಗೆ ಜೈಲು ಶಿಕ್ಷೆ ; ಸ್ವಿಡ್ಜರ್ಲೆಂಡ್ ನ್ಯಾಯಾಲಯದಿಂದ ಮಹತ್ವದ ತೀರ್ಪು
ಸ್ವಿಡ್ಜರ್ಲೆಂಡ್: ಬ್ರಿಟನ್ ನಲ್ಲಿರುವ ಭಾರತೀಯ ಸಂಜಾತ ಉದ್ಯಮಿಗಳಲ್ಲೇ ಅತಿ ಶ್ರೀಮಂತ ಉದ್ಯಮಿಗಳೆಂದೆನಿಸಿರುವ ಹಿಂದೂಜ ಕುಟುಂಬದ ನಾಲ್ಕು ದೈತ್ಯ ಉದ್ಯಮಿಗಳಿಗೆ ತಲಾ ನಾಲ್ಕು ವರ್ಷಗಳಿಗೂ ಮೀರಿದ ಜೈಲು ಶಿಕ್ಷೆಯನ್ನು ಸ್ವಿಡ್ಜರ್ಲೆಂಡ್ ನ್ಯಾಯಾಲಯ ವಿಧಿಸಿದೆ. ಪ್ರಕಾಶ್ ಹಿಂದೂಜಾ ಹಾಗೂ ಅವರ ಪತ್ನಿ ಕಮಲ್ ಹಿಂದೂಜಾ ಅವರಿಗೆ ತಲಾ ನಾಲ್ಕು ವರ್ಷ ಆರು ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದ್ದರೆ, ಈ ದಂಪತಿಯ ಪುತ್ರರಾದ ಅಜಯ್ ಹಿಂದೂಜಾ ಹಾಗೂ ಅವರ ಪತ್ನಿ ನಮ್ರತಾ ಅವರಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಸ್ವಿಡ್ಜರ್ಲೆಂಡ್ ನಲ್ಲಿ ಕಾರ್ಮಿಕರ ಕಾನೂನು ಪ್ರಬಲವಾಗಿದ್ದು, ಅಲ್ಲಿ ಯಾವುದೇ ಕೆಲಸಗಾರರಿಗೆ ಅವರ ಕೆಲಸಕ್ಕೆ ತಕ್ಕಂತೆ ಇಂತಿಷ್ಟು ವೇತನವನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂಬು ಕಾನೂನು ಇದೆ. ಅದನ್ನು ಪಾಲಿಸದ ಹಿನ್ನೆಲೆಯಲ್ಲಿ ಅವರಿಗೆ ಶಿಕ್ಷೆ ವಿಧಿಸಲಾಗಿದೆ.
ಇದೇ ವೇಳೆ, ಸ್ವಿಡ್ಜರ್ಲೆಂಡ್ ನಲ್ಲಿ ಹಿಂದೂಜಾ ಕಂಪನಿಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಅವರ ಮ್ಯಾನೇಜರ್ ನಜೀಬ್ ಝಿಯಾಝಿ ಅವರನ್ನು 18 ತಿಂಗಳುಗಳ ಕಾಲ ಸೇವೆಯಿಂದ ಅಮಾನತುಗೊಳಿಸುವಂತೆ ಅಲ್ಲಿನ ನ್ಯಾಯಾಲಯ ಆದೇಶ ಹೊರಡಿಸಿದೆ.
ಉದ್ಯೋಗಿಗಳಿಗೆ ನಾನಾ ರೀತಿಯಲ್ಲಿ ಕಿರುಕುಳದ ಆರೋಪ
ತಮ್ಮ ಕಂಪನಿಗಳ ಉದ್ಯೋಗಿಗಳ ಪಾಸ್ ಪೋರ್ಟ್ ಗಳನ್ನು ವಶಪಡಿಸಿಕೊಂಡಿದ್ದ ಹಿಂದೂಜಾ ಕಂಪನಿಯು, ಅವುಗಳನ್ನು ಉದ್ಯೋಗಿಗಳಿಗೆ ವಾಪಸ್ ನೀಡದೇ ಸತಾಯಿಸುತ್ತಿತ್ತು. ಕಡಿಮೆ ವೇತನ ನೀಡಿ ಹೆಚ್ಚು ಗಂಟೆಗಳ ಕಾಲ ದುಡಿಸಿಕೊಳ್ಳುತ್ತಿತ್ತು. ಅಷ್ಟೇ ಅಲ್ಲದೆ, ಉದ್ಯೋಗಿಗಳು ವಾಸಿಸುತ್ತಿದ್ದ ಸ್ಥಳಗಳಿಂದ ಎಲ್ಲೂ ಆಚೆ ಹೋಗದಂತೆ ಅವರಿಗೆ ನಿರ್ಬಂಧಗಳನ್ನು ಹೇರಲಾಗಿತ್ತು.
ಸೂರಜ್ ರೇವಣ್ಣ ಪ್ರಕರಣ : ದಯವಿಟ್ಟು ಇಂತಹ ವಿಷಯಗಳನ್ನ ನನ್ನ ಬಳಿ ಚರ್ಚೆ ಮಾಡಬೇಡಿ : ಹೆಚ್‌ಡಿಕೆ ಗರಂ – vishwanews24
ಹಿಂದಿ ಮಾತನಾಡುವ ಉದ್ಯೋಗಿಗಳು ಭಾರತದಲ್ಲಿ ಹೊಂದಿರುವ ಖಾತೆಗಳಿಗೆ ರೂಪಾಯಿಗಳ ಲೆಕ್ಕಾಚಾರದಲ್ಲಿ ವೇತನವನ್ನು ಪಾವತಿಸಲಾಗುತ್ತಿತ್ತು. ಆದರೆ, ಅವರು ಸ್ವಿಡ್ಜರ್ಲೆಂಡ್ ನಲ್ಲಿ ವಾಸಿಸುತ್ತಿದ್ದರಿಂದ ಅವರು ದುಡಿದ ಹಣವನ್ನು ಅವರು ಸ್ವಿಡ್ಜರ್ಲೆಂಡ್ ನಿಂದ ಬಳಸಲು ಆಗುತ್ತಿರಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ, ಹಿಂದೂಜಾ ಕುಟುಂಬದ ವಿರುದ್ಧ ಮಾನವ ಕಳ್ಳಸಾಗಣೆಯ ಆರೋಪವೂ ಇತ್ತು.
ಈ ಮೇಲಿನ ಎಲ್ಲಾ ಆರೋಪಗಳನ್ನು ಸ್ವಿಡ್ಜರ್ಲೆಂಡ್ ನ್ಯಾಯಾಲಯದಲ್ಲಿ ಹಿಂದೂಜಾ ಪರ ವಕೀಲರು ಅಲ್ಲಗಳೆದಿದ್ದರು. ವಾದ ವಿವಾದ ಆಲಿಸಿದ ನ್ಯಾಯಾಲಯ, ಹಿಂದೂಜಾ ಕುಟುಂಬದ ಮೇಲಿದ್ದ ಮಾನವ ಕಳ್ಳಸಾಗಣೆಯ ಆರೋಪವನ್ನು ತಳ್ಳಿಹಾಕಿದೆ. ಆದರೆ, ಅದರ ಜೊತೆಗೆ, ಉದ್ಯೋಗಿಗಳನ್ನು ಶೋಷಣೆಗೆ ಒಳಪಡಿಸಿರುವ ಅಂಶ ಸಾಬೀತಾಗಿರುವುದನ್ನು ಎತ್ತಿ ಹಿಡಿದು ಶಿಕ್ಷೆ ಪ್ರಕಟಿಸಿದೆ.
ಸೂರಜ್ ರೇವಣ್ಣ ಪ್ರಕರಣ : ನಮಗೆ ಅಧಿಕೃತ ದೂರು ಬಂದಿಲ್ಲ , ಬಂದ ಕೂಡಲೇ ಕ್ರಮ : ಪರಮೇಶ್ವರ್ – vishwanews24
