ಸುರತ್ಕಲ್ ನೈತಿಕ ಪೊಲೀಸ್ ಗಿರಿ : ಆರು ಮಂದಿ ಪೊಲೀಸ್ ವಶಕ್ಕೆ – VIshwanews24
ಸುರತ್ಕಲ್ ನೈತಿಕ ಪೊಲೀಸ್ ಗಿರಿ : ಆರು ಮಂದಿ ಪೊಲೀಸ್ ವಶಕ್ಕೆ – VIshwanews24
ಮಂಗಳೂರು : ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ ಪ್ರಕರಣ ನಡೆದಿದ್ದು, ಭಿನ್ನಕೋಮಿನ ಯುವತಿಯೊಂದಿಗೆ ಯುವಕ ಬೈಕ್ ನಲ್ಲಿ ತೆರಳಿದ್ದಕ್ಕೆ ಹಲ್ಲೆ ನಡೆಸಿದ್ದ ಆರು ಮಂದಿರ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಪ್ರಹ್ಲಾದ್, ಪ್ರಶಾಂತ್, ಗುರುಪ್ರಸಾದ್, ಪ್ರತೀಶ್, ಭರತ್, ಸುಖೇಶ್ ಎಂದಿು ಗುರುತಿಸಲಾಗಿದೆ.
ಭಿನ್ನ ಕೋಮಿನ ಯುವತಿಯೊಂದಿಗೆ ಯುವಕನೊಬ್ಬ ಬೈಕ್ ನಲ್ಲಿ ಹೋಗುತ್ತಿದ್ದ ಬೆನ್ನಟ್ಟಿದ ಅರೋಪಿಗಳು, ಮತೀಯ ಗೂಂಡಾಗಿರಿ ನಡೆಸಿದ್ದಾರೆ. ಬೈಕ್ ನಲ್ಲಿ ಹೋಗುತ್ತಿದ್ದ ಯುವಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ, ಆತನನ್ನು ಥಳಿಸಿದ್ದಾರೆ. ಯುವತಿ ಅಪಾರ್ಟ್ ಮೆಂಟ್ ಖಾಲಿ ಮಾಡುತ್ತಿದ್ದುದರಿಂದ ಲಗೇಜ್ ಶಿಫ್ಟ್ ಮಾಡಿ ಯುವಕ ಯುವತಿಯನ್ನು ಕರೆದುಕೊಂಡು ಹೋಗುತ್ತಿದ್ದ.
ಈ ವೇಳೆ ಬೈಕ್ ಹಿಂಬಾಲಿಸಿ ಬಂದ ಯುವಕರ ತಂಡ ಯುವಕನಿಗೆ ಥಳಿಸಿದೆ. ಈ ಬಗ್ಗೆ ಯುವಕ ಸುರತ್ಕಲ್ ಠಾಣೆಗೆ ದೂರು ನೀಡಿದ್ದು, ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಸ್ಥಳಕ್ಕೆ ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೇರಳ : ಭಾರೀ ಮಳೆಯ ಹಿನ್ನೆಲೆ ; 8 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ – Vishwanews24
