ಸುರತ್ಕಲ್ : ವಸತಿಗೃಹದಲ್ಲಿ ವೇಶ್ಯಾವಾಟಿಕೆ ದಂಧೆ ; ಇಬ್ಬರ ಬಂಧನ -Vishwanews24
ಸುರತ್ಕಲ್ : ವಸತಿಗೃಹದಲ್ಲಿ ವೇಶ್ಯಾವಾಟಿಕೆ ದಂಧೆ ; ಇಬ್ಬರ ಬಂಧನ -Vishwanews24
ಮಂಗಳೂರು,: ಸುರತ್ಕಲ್ ಬಳಿಯ ಬಾಳ ಗ್ರಾಮದ ಸಮೀಪದ ವಸತಿಗೃಹದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಹಳೆಯಂಗಡಿಯ ತೋಕುರು ನಿವಾಸಿ ತೋಕೂರು ಹರೀಶ್ (42) , ಹಾಗೂ ಬಂಟ್ವಾಳದ ದಡ್ಡಲ್ ಕಾಡ್, ಮೂಡ ನಡಗೋಡು ಗ್ರಾಮದ ನಿವಾಸಿ ಲೋಕನಾಥ್ ಫೂಜಾರಿ @ ನವೀನ್ (42) ಎಂದು ಗುರುತಿಸಲಾಗಿದೆ.
ಕೊರೊನಾ ಲಸಿಕೆ ಹಾಕಿಸಿಕೊಂಡ ಪ್ರಧಾನಿ ಮೋದಿ , ಎಲ್ಲರೂ ಲಸಿಕೆ ತೆಗೆದುಕೊಳ್ಳುವಂತೆ ಮನವಿ -Vishwanews24
ಆರೋಪಿಗಳು ಬಾಳ ಗ್ರಾಮದ ಬಿ ಎ ಎಸ್ ಎಫ್ ಫ್ಯಾಕ್ಟರಿಯ ಎದುರುಗಡೆಯ ಫೆರಾವೊ ಕಾಂಪ್ಲೇಕ್ಸ್ ನಲ್ಲಿರುವ ಫೆರಾವೊ ಲಾಡ್ಜಿಂಗ್ & ಬೋರ್ಡಿಂಗ್ ನ ರಲ್ಲಿ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದರು. ಇದೇ ವೇಳೆ ಬೆಂಗಳೂರು ಉತ್ತರಹಳ್ಳಿಯ ನಿವಾಸಿ ಸಂತ್ರಸ್ತೆ ಮಹಿಳೆಯನ್ನು ಪೊಲೀಸರು ರಕ್ಷಿಸಿದ್ದಾರೆ.
ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು: ಮದುವೆಯ ಮರುದಿನ ಹೃದಯಾಘಾತದಿಂದ ಮೃತಪಟ್ಟ ಮದುಮಗಳು -Vishwanews24
