ಸುರತ್ಕಲ್‌ : ಸ್ನೇಹಿತರಿಂದ ಪಡೆದಿದ್ದ ಸಾಲ ಹಿಂದಿರುಗಿಸಲು ಸಾಧ್ಯವಾಗದೆ ಸಮುದ್ರಕ್ಕೆ ಹಾರಿ ಯುವಕ ಆತ್ಮಹತ್ಯೆ – Vishwanews24

Featured, ದಕ್ಷಿಣ ಕನ್ನಡ

ಸುರತ್ಕಲ್‌ : ಸ್ನೇಹಿತರಿಂದ ಪಡೆದಿದ್ದ ಸಾಲ ಹಿಂದಿರುಗಿಸಲು ಸಾಧ್ಯವಾಗದೆ ಸಮುದ್ರಕ್ಕೆ ಹಾರಿ ಯುವಕ ಆತ್ಮಹತ್ಯೆ – Vishwanews24

ಸುರತ್ಕಲ್‌: ಸ್ನೇಹಿತರಿಂದ ಪಡೆದಿದ್ದ ಸಾಲ ಹಿಂದಿರುಗಿಸಲು ಸಾಧ್ಯವಾಗದೆ ಯುವಕನೋರ್ವ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸುರತ್ಕಲ್‌ ಮಲ್ಲಮಾರ್‌ ಬೀಚ್‌ನಲ್ಲಿ ಸೋಮವಾರ ನಡೆದಿದೆ.

ಕಾಟಿಪಳ್ಳ ನಿವಾಸಿ ಕ್ಯಾಂಡ್ರಿಕ್‌ ಲಾರೆನ್ಸ್‌ ಡಿ’ಸೋಜಾ (20) ಮೃತ ಯುವಕ.

ಕೆಲಸದಿಂದ ರಜೆ ಪಡೆದಿದ್ದ ಅವರು ಸೋಮವಾರ ಬೆಳಗ್ಗೆ 11.30ಕ್ಕೆ ಮನೆ ಬಿಟ್ಟು ತೆರಳಿದ್ದು, ತಾಯಿ ಹುಡುಕಾಟ ನಡೆಸಿದಾಗ ಡೆತ್‌ನೋಟ್‌ ಪತ್ತೆಯಾಗಿತ್ತು. ತತ್‌ಕ್ಷಣ ಹುಡುಕಾಡಿದರೂ ಪತ್ತೆಯಾಗಲಿಲ್ಲ. 3 ಗಂಟೆಯ ಹೊತ್ತಿಗೆ ಅವರ ಮೃತದೇಹ ಸುರತ್ಕಲ್‌ ಬೀಚ್‌ ಬಳಿ ಕಂಡುಬಂದಿದೆ.

ಸ್ನೇಹಿತರಿಗೆ, ಅಮ್ಮನಿಂದ ಚಿನ್ನ ಪಡೆದು ಅಡವಿರಿಸಿ ಸಾಲ ಪಡೆದಿದ್ದು, ಹಿಂದಿರುಗಿಸಲು ಸಾಧ್ಯವಾಗುತ್ತಿಲ್ಲ. ನನ್ನ ಸಾವಿಗೆ ನಾನೇ ಕಾರಣ ಎಂದು ಬರೆಯಲಾಗಿದೆ. ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಸ್ಲಿಮರಿಗೆ ತಾಕತ್ತಿದ್ದರೆ ನಿಮ್ಮ ಎಲ್ಲಾ ಹೆಣ್ಣುಮಕ್ಕಳಿಗೆ ಹಿಜಾಬ್ ಹಾಕಿಸಿ : RSS ಮುಖಂಡ – Vishwanews24

Leave a Reply