ಸುಳ್ಯ: ಮರ ಕತ್ತರಿಸುವ ವೇಳೆ ಹೃದಯಘಾತ ; ವ್ಯಕ್ತಿ ಸಾವು – vishwanews24
ಸುಳ್ಯ: ಮರ ಕತ್ತರಿಸುವ ವೇಳೆ ಹೃದಯಘಾತ ; ವ್ಯಕ್ತಿ ಸಾವು
ಸುಳ್ಯ: ತಾಲೂಕಿನ ತೊಡಿಕಾನ ಗ್ರಾಮದ ಬಾಳೆಕಜೆ ದಿ.ಆನಂದ ಅವರ ಮಗ ನಿರಂಜನಾಕ್ಷ(47) ಸೆ.7ರಂದು ಮರ ಕತ್ತರಿಸುವ ವೇಳೆ ಹೃದಯಘಾತವಾಗಿ ಸಾವನ್ನಪ್ಪಿದ್ದ ಘಟನೆ ನಡೆದಿದೆ.
ತೊಡಿಕಾನ ಮೂಲದ ನಿರಂಜನ್ ಅವರು ಬೆಳಿಗ್ಗೆ ಕಲ್ಲುಗುಂಡಿಗೆ ರಬ್ಬರ್ ಮರ ಕತ್ತರಿಸುವ ಕೆಲಸಕ್ಕೆ ಹೋಗಿದ್ದರು. ಕೆಲಸ ಆರಂಭಿಸಿದ ಕೆಲವೇ ಹೊತ್ತಿನಲ್ಲಿ ಅವರಿಗೆ ಆರೋಗ್ಯದಲ್ಲಿ ಏರುಪೇರಾಗಿದ್ದು, ತಕ್ಷಣ ರಿಕ್ಷಾದಲ್ಲಿ ಕಲ್ಲುಗುಂಡಿಯ ಕ್ಲಿನಿಕ್‌ಗೆ ಕರೆತರಲಾಯಿತು.
ಸೆ.20ರಿಂದ 108 ಅಂಬುಲೆನ್ಸ್ ಸೇವೆ ಬಂದ್ : ನೌಕರರಿಂದ ಸಾಮೂಹಿಕ ರಾಜೀನಾಮೆಯ ಎಚ್ಚರಿಕೆ – vishwanews24
ಅಲ್ಲಿ ವೈದ್ಯರು ಪರೀಕ್ಷಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ತಕ್ಷಣ ಸುಳ್ಯದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಕಲ್ಲುಗುಂಡಿ ಆಂಬುಲೆನ್ಸ್‌ನಲ್ಲಿ ನಿರಂಜನ್ ಅವರನ್ನು ಸುಳ್ಯಕ್ಕೆ ಕರೆದೊಯ್ಯಲಾಗುತ್ತಿತ್ತು. ಆದರೆ ಆಸ್ಪತ್ರೆ ತಲುಪುವ ಮುನ್ನವೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಅಸ್ವಸ್ಥಗೊಂಡ ನಿರಂಜನ್ ಅವರಿಗೆ ಸ್ಥಳೀಯರು ಸಿಪಿಆರ್ ನೀಡುವ ಮೂಲಕ ಜೀವ ಉಳಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಎನ್ನಲಾಗಿದೆ. ಅವರು ನುರಿತ ಮರ ಕಟಾವು ಕಾರ್ಮಿಕರಾಗಿದ್ದರು ಎಂದು ತಿಳಿದು ಬಂದಿದೆ. ಸಾವಿನ ನಿಖರ ಕಾರಣಕ್ಕೆ ವೈದ್ಯಕೀಯ ವರದಿ ಬಳಿಕ ತಿಳಿದು ಬರಲಿದೆ. ಮೃತರು ತಾಯಿ,ಪತ್ನಿ ಇಬ್ಬರು ಗಂಡು ಮಕ್ಕಳು,ಸಹೋದರ ಸಹೋದರಿಯನ್ನು ಅಗಲಿದ್ದಾರೆ.
