ಸುವರ್ಣ ತ್ರಿಭುಜ ಬೋಟ್ ದುರಂತ ಪ್ರಕರಣ : 40 ಲಕ್ಷ ವಿಮಾ ಪರಿಹಾರ ಮಂಜೂರು -Vishwanews24

Featured, ಉಡುಪಿ

ಸುವರ್ಣ ತ್ರಿಭುಜ ಬೋಟ್ ದುರಂತ ಪ್ರಕರಣ : 40 ಲಕ್ಷ ವಿಮಾ ಪರಿಹಾರ ಮಂಜೂರು -Vishwanews24

ಮಹಾಲಕ್ಷ್ಮೀ  ಕೋ ಆಪರೇಟಿವ್ ಬ್ಯಾಂಕ್ ವತಿಯಿಂದ ನ್ಯಾಷನಲ್ ಇನ್ಶುರೆನ್ಸ್  ಪ್ರಬಂಧಕರಿಗೆ ಅಭಿನಂದನೆ

ಸುವರ್ಣ ತ್ರಿಭುಜ ಬೋಟ್ ದುರಂತ ಪ್ರಕರಣದಲ್ಲಿ ರೂ. 4೦,೦೦,೦೦೦ ವಿಮಾ ಪರಿಹಾರ ಮೊತ್ತವನ್ನು ಮಂಜೂರು ಮಾಡುವಲ್ಲಿ ವಿಶೇಷ ಮುತುವರ್ಜಿ ವಹಿಸಿದ ನ್ಯಾಷನಲ್ ಇನ್ಶುರೆನ್ಸ್  ಹಿರಿಯ ವಿಭಾಗೀಯ ಪ್ರಬಂಧಕರಾದ ಶ್ರೀಮತಿ ಪ್ರತಿಭಾ ಶೆಟ್ಟಿಯವರನ್ನು ಮಹಾಲಕ್ಷ್ಮೀ  ಕೋ ಆಪರೇಟಿವ್ ಬ್ಯಾಂಕ್ ವತಿಯಿಂದ ಆಧ್ಯಕ್ಷರಾದ ಶ್ರೀ ಯಶ್‌ಪಾಲ್ ಸುವರ್ಣ ಸನ್ಮಾನಿಸಿ ಅಭಿನಂದಿಸಲಾಯಿತು.

ಅಭಿನ0ದನೆ ಸ್ವೀಕರಿಸಿದ ಪ್ರತಿಭಾ ಶೆಟ್ಟಿಯವರು ವಿಮಾ ಪರಿಹಾರ ಮಂಜೂರಾತಿ ಪ್ರಕ್ರಿಯೆಯಲ್ಲಿ ಮಹಾಲಕ್ಷ್ಮೀ  ಬ್ಯಾಂಕ್ ಹಾಗೂ ಮೀನುಗಾರರ ಸಂಘದ ಪೂರಕ ಸಹಕಾರದಿಂದ ಈ ಗರಿಷ್ಠ ಮೊತ್ತ ಪರಿಹಾರ ನೀಡಲು ಸಾಧ್ಯವಾಯಿತು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಯಶ್‌ಪಾಲ್ ಸುವರ್ಣ, ಸುವರ್ಣ ತ್ರಿಭುಜ ಬೋಟ್ ವಿಮಾ ಪರಿಹಾರ ಮಂಜೂರಾತಿಯಿ0ದ ಬ್ಯಾಂಕ್ ಒದಗಿಸಿದ್ದ ಬೋಟಿನ ಸಾಲ ಮರುಪಾವತಿಗೆ ಅನುಕೂಲವಾಯಿತು. ವಿಮಾ ಪರಿಹಾರ ಮಂಜೂರಾತಿಗೆ ಎದುರಾದ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲು ಸಹಕರಿಸಿದ ಕೇಂದ್ರ ಸಚಿವರಾದ ಶ್ರೀಮತಿ ನಿರ್ಮಲ ಸೀತರಾವiನ್, ಶ್ರೀ ರಾಜನಾಥ ಸಿಂಗ್, ಸಂಸದರಾದ ಶೋಭಾ ಕರಂದ್ಲಾಜೆ, ಶಾಸಕರಾದ ಶ್ರೀ ಕೆ. ರಘುಪತಿ ಭಟ್, ಮಲ್ಪೆ ಮೀನುಗಾರರ ಸಂಘ ಹಾಗೂ ನ್ಯಾಷನಲ್ ಇನ್ಶೂö್ಯರೆನ್ಸ್ ಕಂಪೆನಿಯ ಸಿಬ್ಬಂದಿಗಳಿಗೆ ಬ್ಯಾಂಕಿನ ವತಿಯಿಂದ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಸಮಾರಂಭದಲ್ಲಿ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷರಾದ ಶ್ರೀ ಕೃಷ್ಣ ಸುವರ್ಣ, ಪ್ರಧಾನ ಕಾರ್ಯದರ್ಶಿ ಶ್ರೀ ಸುಭಾಸ್ ಮೆಂಡನ್, ಯಾಂತ್ರಿಕ ಟ್ರಾಲ್ ಬೋಟ್ ಸಹಕಾರಿ ಸಂಘದ ಅಧ್ಯಕ್ಷರದ ಶ್ರೀ ರಾಮಚಂದ್ರ ಕುಂದರ್, ಆಳಸಮುದ್ರ ಮೀನುಗಾರರ ಸಂಘದ ಅಧ್ಯಕ್ಷ ಶ್ರೀ ಕಿಶೋರ್ ಸುವರ್ಣ, ಆಳ ಸಮುದ್ರ ಬೋಟ್ ತಂಡೇಲರ ಸಂಘದ ಅಧ್ಯಕ್ಷ ಶ್ರೀ ರವಿರಾಜ್ ಸುವರ್ಣ, ನ್ಯಾಷನಲ್ ಇನ್ಶುರೆನ್ಸ್ ಕಂಪೆನಿಯ ಅಧಿಕಾರಿ ಶ್ರೀ ನರಸಿಂಹ ಪೈ, ವಿಮಾ ಪ್ರತಿನಿಧಿಗಳಾದ ಶ್ರೀ ವಸಂತ್ ಎನ್. ಕೋಟ್ಯಾನ್, ಶ್ರೀ ವಿಜಯ ಪ್ರಕಾಶ್ ಹಾಗೂ ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕರು ಉಪಸ್ಥಿತರಿದ್ದರು.