ಸೆ.26ರಿಂದ ಮೂಡುಬಿದಿರೆಯಲ್ಲಿ ಕಂಬಳ ಅಕಾಡೆಮಿಯಿಂದ ಓಟಗಾರರಿಗೆ ತರಬೇತಿ ಶಿಬಿರ ಆರಂಭ – vishwanews24

Featured, ದಕ್ಷಿಣ ಕನ್ನಡ

ಸೆ.26ರಿಂದ ಮೂಡುಬಿದಿರೆಯಲ್ಲಿ ಕಂಬಳ ಅಕಾಡೆಮಿಯಿಂದ ಓಟಗಾರರಿಗೆ ತರಬೇತಿ ಶಿಬಿರ ಆರಂಭ

ಮೂಡುಬಿದಿರೆ: ಕಂಬಳ ಸಂರಕ್ಷಣೆ, ನಿರ್ವಹಣೆ ಮತ್ತು ತರಬೇತಿ ಅಕಾಡೆಮಿ ಮಿಯಾರು ಕಾರ್ಕಳ ಇದರ ವತಿಯಿಂದ ಕಡಲಕೆರೆಯ ಸೃಷ್ಠಿ ಗಾರ್ಡನಲ್ಲಿ ನಡೆಯುವ ಏಳನೇ ವಷ೯ದ ಕಂಬಳ ತರಬೇತಿ ಶಿಬಿರವು ಸೆ.26ರಿಂದ ಹತ್ತು ದಿನಗಳವರೆಗೆ ನಡೆಯಲಿದೆ ಎಂದು ಕಂಬಳ ಅಕಾಡಮಿಯ ಸಂಚಾಲಕರಾದ ಗುಣಪಾಲ ಕಡಂಬ ಹೇಳಿದರು.

ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 11 ಜನ ಸಮಾನ ಮನಸ್ಕ ಕೃಷಿಕರು ಸೇರಿಕೊಂಡು 2011ರಲ್ಲಿ ಶಿರ್ಲಾಲು ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಕಂಬಳ ಅಕಾಡಮಿಯನ್ನು ಆರಂಭಿಸಲಾಯಿತು. ಮಿಯಾರಿನಲ್ಲಿ ಐದು ವರ್ಷ ತರಬೇತಿ ಶಿಬಿರ ನಡೆದು ಮೂಡುಬಿದಿರೆಯ ಕಡಲಕೆರೆಯಲ್ಲಿ ಎರಡನೇ ವರ್ಷದ ಶಿಬಿರ ನಡೆಯಲಿದೆ ಎಂದರು.

ಇದನ್ನೂ ಓದಿ :

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವಸತಿ ಬುಕಿಂಗ್ ಹೆಸರಲ್ಲಿ ನಕಲಿ ವೆಬ್‌ಸೈಟ್ ; ಪ್ರಕರಣ ದಾಖಲು – vishwanews24

ಸೆ.12ಕ್ಕೆ ಮೊದಲ ಸುತ್ತಿನ ಆಯ್ಕೆ ನಡೆದರೆ ರಾಷ್ಟ್ರೀಯ ತರಬೇತುದಾರರು ಎರಡನೇ ಸುತ್ತಿನಲ್ಲಿ ಅಂತಿಮ 40 ಮಂದಿಯನ್ನು ಆಯ್ಕೆ ಮಾಡಲಿದ್ದಾರೆ ಎಂದರು. ಆಯ್ಕೆಯಾದ ಶಿಬಿರಾರ್ಥಿಗಳಿಗೆ ಸೆ.26ರಿಂದ ಹತ್ತು ದಿನಗಳ ಕಾಲ ಕಂಬಳ ಕ್ಷೇತ್ರದ ವಿವಿಧ ಅನುಭವಿಗಳಿಂದ ತರಬೇತಿ ನೀಡಲಾಗುವುದು. ಕೋಣಗಳನ್ನು ಓಡಿಸುವುದು, ಕೋಣಗಳ ಸಾಕಣೆ, ಆಹಾರ ಪದ್ದತಿ, ಹಗ್ಗ ನೇಯ್ಗೆ, ಯೋಗ, ಆತ್ಮಸ್ಥೆಯ೯ ಹೆಚ್ಚಿಸಲು ಮಾನಸಿಕ ತಜ್ಞರಿಂದ ಮಾಹಿತಿ, ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ನಡೆಯಲಿದೆ ಎಂದರು.

ಕಂಬಳ ಕ್ಷೇತ್ರಕ್ಕೆ ಮಹಿಳೆಯರನ್ನು ಆಕರ್ಷಿಸುವ ನಿಟ್ಟಿನಲ್ಲಿ ಅವರಿಗೆ ತೀರ್ಪುಗಾರರು ಹಾಗೂ ಉದ್ಘೋಷಕರಾಗಿ ಕಾರ್ಯನಿರ್ರ್ವವಹಿಸುವ ಬಗ್ಗೆ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ :

ಡಿಕೆ ಶಿ ಸರ್ಕಾರಕ್ಕೆ 100 ದಿನದ ಸಂಭ್ರಮ : ಕಾಂಗ್ರೆಸ್‌ ಜಿಲ್ಲಾಧ್ಯಕ್ಷರ ಪಟ್ಟಿ ಬಿಡುಗಡೆ  – vishwanews24

ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲಾ ವ್ಯಾಪ್ತಿಗೊಳಪಡುವ 18 ವರ್ಷ ಮೇಲ್ಪಟ್ಟ ಆಸಕ್ತರು ಸ್ಥಳದಲ್ಲೆ ತಮ್ಮ ಹೆಸರು ನೋಂದಾಯಿಸಬಹುದು ಎಂದರು. ಕಂಬಳ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ನಮ್ಮ ಕಂಬಳ ಅಕಾಡಮಿಗೆ 2017ರಲ್ಲಿ ರಾಜ್ಯ ಸರಕಾರದ ಕ್ರೀಡಾ ಇಲಾಖೆ ಕ್ರೀಡಾ ಪೋಷಕ ಪ್ರಶಸ್ತಿ ನೀಡಿ ಗೌರವಿಸಿದೆ ಎಂದರು.

ಅಕಾಡಮಿಯ ಮೊದಲ ಬ್ಯಾಚ್‌ನ ಶಿಬಿರಾರ್ಥಿ, ಓಟಗಾರ ಶ್ರೀನಿವಾಸ ಗೌಡ ಎರಡನೇ ಬ್ಯಾಚ್‌ನ ಶಿಬಿರಾರ್ಥಿ, ಓಟಗಾರ ಪಣಪಿಲ ಪ್ರವೀಣ್ ಕೋಟ್ಯಾನ್ ಉಪಸ್ಥಿತರಿದ್ದರು.

Leave a Reply