ಸೇಂಟ್ ಮೇರಿಸ್ ಪ್ರವಾಸ ನಿಷೇಧ..

Featured, ಉಡುಪಿ

ಉಡುಪಿ: ಇನ್ನು ನಾಲ್ಕು ತಿಂಗಳ ಕಾಲ ಸೇಂಟ್ ಮೇರಿಸ್ ದ್ವೀಪ ಪ್ರವಾಸ ನಿಷೇಧಿಸಲಾಗಿದೆ. ಮಲ್ಪೆ ಬೀಚ್‌ನಿಂದ ಹಾಗೂ ಮಲ್ಪೆ ಬಂದರಿನಿಂದ ಸೇಂಟ್ ಮೆರೀಸ್ ದ್ವೀಪಕ್ಕೆ ಪ್ರಯಾಣಿಸುವ ಬೋಟ್‌ಗಳಿಗೆ ಮತ್ತು ಮಲ್ಪೆ ಬೀಚ್‌ನಲ್ಲಿ ಜಲಕ್ರೀಡಾ ಚಟುವಟಿಕೆ ನಡೆಸುವ ಎಲ್ಲ ಪ್ರವಾಸಿ ಬೋಟ್‌ಗಳಿಗೆ ಪ್ರತಿ ವರ್ಷದಂತೆ ಮೇ 16ರಿಂದ ಸೆಪ್ಟೆಂಬರ್ 15ರ ವರೆಗೆ ಬೋಟ್ ಚಲಾಯಿಸಲು ಅನುಮತಿ ಇರುವುದಿಲ್ಲ ಹಾಗೂ ಬೋಟ್ ಚಲಾಯಿಸುವುದು ನಿಷಿದ್ಧವಾಗಿರುತ್ತದೆ ಎಂದು ಮಲ್ಪೆ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಪ್ರಕಟಣೆ ತಿಳಿಸಿದೆ.