ಸೇಲಂ ಬಳಿ ಭೀಕರ ರಸ್ತೆ ಅಪಘಾತ; ಕರ್ನಾಟಕ ಮೂಲದವರು ಸೇರಿ 7 ಮಂದಿ ಸಾವು
ಸೇಲಂ(ತಮಿಳುನಾಡು): ತಿರುವಳ್ಳಗೆ ತೆರಳುತ್ತಿದ್ದ ಖಾಸಗಿ ಬಸ್ಸು ಎದುರಿನಿಂದ ಬರುತ್ತಿದ್ದ ಇನ್ನೊಂದು ಖಾಸಗಿ ಬಸ್ಸಿನ ನಡುವೆ ಸೇಲಂ ಬಳಿ ಮುಖಾಮುಖಿ ಡಿಕ್ಕಿಯುಂಟಾಗಿ ಏಳು ಮಂದಿ ಪ್ರಯಾಣಿಕರು ಮೃತಪಟ್ಟಿದ್ದು ಅವರಲ್ಲಿ ಮೂವರು ಕರ್ನಾಟಕ ಮೂಲದವರು ಮತ್ತು ಇನ್ನು ನಾಲ್ವರು ಕೇರಳ ಮೂಲದವರಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ತಮಿಳುನಾಡಿನ ಸೇಲಂ ಬಳಿ ಶನಿವಾರ ನಸುಕಿನ ಜಾವ ಸಂಭವಿಸಿದೆ.
ಮೃತಪಟ್ಟವರ ಗುರುತು ಹಿಡಿಯಲಾಗದಷ್ಟು ಅಪಘಾತದಲ್ಲಿ ದೇಹ ಛಿದ್ರವಾಗಿದೆ. ಚಾಲಕನ ಅಜಾಗರೂಕತೆ ಮತ್ತು ನಿದ್ದೆಯ ಮಂಪರಿನಲ್ಲಿದ್ದ ಕಾರಣ ಅಪಘಾತ ಸಂಭವಿಸಿರಬಹುದು ಎಂದು ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಹೇಳಿದ್ದಾರೆ.
ಅಪಘಾತದಲ್ಲಿ 35ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸುವ ಕೆಲಸ ನಡೆಯುತ್ತಿದೆ.
