ಸೈಬರ್ ಕಾಪ್ ಪ್ರಶಸ್ತಿಗೆ ಕರ್ನಾಟಕದ ಸಿಐಡಿ ಡಿವೈಎಸ್ಪಿ ಯಶವಂತಕುಮಾರ್ ಆಯ್ಕೆ – VIshwanews24
ಸೈಬರ್ ಕಾಪ್ ಪ್ರಶಸ್ತಿಗೆ ಕರ್ನಾಟಕದ ಸಿಐಡಿ ಡಿವೈಎಸ್ಪಿ ಯಶವಂತಕುಮಾರ್ ಆಯ್ಕೆ – VIshwanews24
ಬೆಂಗಳೂರು: ಸೈಬರ್ ಅಪರಾಧ ಪ್ರಕರಣಗಳ ತನಿಖೆ ವೇಳೆ ತಾಂತ್ರಿಕ ಮತ್ತು ಡಿಜಿಟಲ್ ಮಾಹಿತಿ, ಸಾಕ್ಷ್ಯ ಸಂಗ್ರಹಿಸಿ ಪತ್ತೆ ಹಚ್ಚಿದ ಅತ್ಯುತ್ತಮ ಸೇವೆ ನೀಡುವ ಸೈಬರ್ ಕಾಪ್ ಪ್ರಶಸ್ತಿಗೆ ಸಿಐಡಿ ಡಿವೈಎಸ್ಪಿ ಯಶವಂತಕುಮಾರ್ ಆಯ್ಕೆಯಾಗಿದ್ದಾರೆ.
ಕೇಂದ್ರ ಸರ್ಕಾರದ ಡೇಟಾ ಸೆಕ್ಯೂರಿಟಿ ಕೌನ್ಸಿಲ್ ಆಫ್ ಇಂಡಿಯಾ ನೀಡುವ ಪ್ರಶಸ್ತಿ ಇದಾಗಿದೆ. ಸೈಬರ್ ಅಪರಾಧಗಳ ಅತ್ಯುತ್ತಮ ತನಿಖೆಗೆ ನೀಡುವ ಪ್ರಶಸ್ತಿ ಆಗಿದೆ.
Congratulations to DSP Yashvanth from Karnataka CID for winning “cyber cop of the year” award. Karnataka State Police stand committed to strengthen its cyber crime investigation capabilities. @JnanendraAraga @CMofKarnataka pic.twitter.com/PNz9e00mNE
— DGP KARNATAKA (@DgpKarnataka) December 16, 2021
ದೇಶದ ಎಲ್ಲೆಡೆಯಿಂದ 55 ಸೈಬರ್ ಅಪರಾಧ ಪ್ರಕರಣಗಳು ವರದಿಗಳನ್ನು ಸಲ್ಲಿಸಲಾಗಿತ್ತು. ಅಂತಿಮವಾಗಿ ಆಂಧ್ರಪ್ರದೇಶದ, ಉತ್ತರಾಖಂಡ ಮತ್ತು ಕರ್ನಾಟಕ ತನಿಖಾಧಿಕಾರಿಗಳು ಆಯ್ಕೆ ಪಟ್ಟಿಯಲ್ಲಿ ಇದ್ದರು. ಅಂತಿಮವಾಗಿ ಯಶವಂತ್ ಕುಮಾರ್ ಆಯ್ಕೆಯಾಗಿದ್ದಾರೆ.
ಪ್ರಧಾನಿ ಮೋದಿಗೆ ಭೂತಾನ್ ಸರ್ಕಾರದ ಅತ್ಯುನ್ನತ ನಾಗರಿಕ ಪ್ರಶಸ್ತಿ ಗೌರವ – Vishwanews24
