ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಇಡಿ ವಿಚಾರಣೆ : ಮಂಗಳೂರಿನಲ್ಲಿ ಕಾಂಗ್ರೆಸ್‌ ಪ್ರತಿಭಟನೆ – Vishwanews24 

Featured, ದಕ್ಷಿಣ ಕನ್ನಡ

ರಾಹುಲ್‌ ಗಾಂಧಿ ಇಡಿ ವಿಚಾರಣೆ: ಮಂಗಳೂರಿನಲ್ಲಿ ಕಾಂಗ್ರೆಸ್‌ ಪ್ರತಿಭಟನೆ ..

ಪ್ರತಿಭಟನಾ ನಿರತ  ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು ..

ಮಂಗಳೂರು: ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಇಡಿ ವಿಚಾರಣೆ ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಮುಖಂಡರು ನಗರದ ಫಳ್ನೀರ್‌ನ ಎಸ್‌ಎಲ್‌ ಮಥಾಯಿಸ್‌ ಪಾರ್ಕ್‌ನಿಂದ ಅತ್ತಾವರದ ಇಡಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಮಾಜಿ ಸಚಿವ ರಮಾನಾಥ್ ರೈ, ಐವಾನ್ ಡಿಸೋಜಾ, ಹರೀಶ್‌ ಕುಮಾರ್‌ ಮುಂತಾದ ಮುಖಂಡರು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗಿಯಾಗಿ ಕೇಂದ್ರ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.

ಪ್ರತಿಭಟನಾ ನಿರತ ಮುಖಂಡರು ಹಾಗೂ ಕಾರ್ಯಕರ್ತ ಕೇಂದ್ರ ಸರ್ಕಾರ ವಿರುದ್ಧ ಘೊಷಣೆ ಕೂಗಿ, ಇಡಿ ಕಚೇರಿಗೆ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ಪ್ರತಿಭಟನಾ ನಿರತರನ್ನು ತಡೆದು, ಕಾರ್ಯಕರ್ತರನ್ನು ವಶಕ್ಕೆ ಪಡೆದರು.

ಅಗ್ನಿಪಥ್ ಯೋಜನೆ : ಕೇಂದ್ರದ ಯೋಜನೆಗಳನ್ನು ದೇಶದ ಜನ ಸ್ವೀಕಾರ ಮಾಡುತ್ತಿಲ್ಲ : ರಾಹುಲ್ ಗಾಂಧಿ – Vishwanews24

Leave a Reply