ಸೌಜನ್ಯ ಪ್ರಕರಣ ಮರುತನಿಖೆ ಅಸಾಧ್ಯ ,ಈ ಪ್ರಕರಣಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ: ಗೃಹ ಸಚಿವ ಪರಮೇಶ್ವರ್ – Vishwanews24
ಸೌಜನ್ಯ ಪ್ರಕರಣವನ್ನು ಪುನಃ ತೆರೆಯುವ ಯಾವುದೇ ಪ್ರಸ್ತಾಪ ಸರ್ಕಾರ ಹೊಂದಿಲ್ಲ..
ಕಾನೂನಾತ್ಮಕವಾಗಿ ಈ ಪ್ರಕರಣ ಮುಗಿದು ಹೋಗಿದೆ : ಗೃಹ ಸಚಿವ ಪರಮೇಶ್ವರ್
ಬೆಂಗಳೂರು: ಧರ್ಮಸ್ಥಳದಲ್ಲಿ 11 ವರ್ಷಗಳ ಹಿಂದೆ ಸಂಭವಿಸಿದ ಸೌಜನ್ಯಾ ಅತ್ಯಾಚಾರ, ಹತ್ಯೆ ಪ್ರಕರಣವನ್ನು ಮರು ತನಿಖೆಗೊಳಪಡಿಸಲು ತೀವ್ರ ಹೋರಾಟ ನಡೆಯುತ್ತಿರುವಾಗಲೇ ಸರಕಾರ ಮರು ತನಿಖೆ ಅಸಾಧ್ಯ ಎಂದು ಹೇಳಿದೆ.
ಈ ಕುರಿತು ಮಾತನಾಡಿರುವ ಗೃಹ ಸಚಿವ ಜಿ. ಪರಮೇಶ್ವರ, ಈ ಪ್ರಕರಣ ಕಾನೂನಾತ್ಮಕವಾಗಿ ಮುಗಿದು ಹೋಗಿದೆ. ಪ್ರಕರಣಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಸೌಜನ್ಯಾ ವೇದಿಕೆಗಳಲ್ಲಿ ಹರಡುತ್ತಿರುವ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಇನ್ನು ಮುಂದೆ ಕರಿಮಣಿ ಮಾಲೀಕ ನಾನಲ್ಲ: ವಿಚ್ಛೇದನ ಘೋಷಿಸಿದ ಕಿರಿಕ್ ಕೀರ್ತಿ – Vishwanews24
ಶುಕ್ರವಾರ ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಪರಮೇಶ್ವರ್ ಪ್ರಕರಣದ ಮರುತನಿಖೆ ಅಸಾಧ್ಯ ಎಂದು ಹೇಳಿದ್ದಾರೆ. ಪ್ರಕರಣವನ್ನು ಪುನಃ ತೆರೆಯುವ ಯಾವುದೇ ಪ್ರಸ್ತಾಪ ಸರ್ಕಾರ ಹೊಂದಿಲ್ಲ ಎಂದು ಅವರು ಸ್ಪಷ್ಟಪಡಿಒಸಿದ್ದಾರೆ. ದೇಶದ ಪರಮೋಚ್ಚ ತನಿಖಾ ಸಂಸ್ಥೆ ಸಿಬಿಐಯೇ ತನಿಖೆ ನಡೆಸಿದ ಬಳಿಕ ತಾಂತ್ರಿಕವಾಗಿ ಮತ್ತು ಕಾನೂನಾತ್ಮಕವಾಗಿ ಮರುತನಿಖೆ ಅಸಾಧ್ಯ ಎಂದು ಕೆಲವು ನ್ಯಾಯ ಪಂಡಿತರು ಕೂಡ ಹಿಂದೆಯೇ ಅಭಿಪ್ರಾಯಪಟ್ಟಿದ್ದರು.
