ಸೌದಿಯಲ್ಲಿ ಹೃದಯಾಘಾತ: ಪಡುಬಿದ್ರಿ ಮೂಲದ ಉದ್ಯಮಿ ನಿಧನ – vishwanews24

Featured, ಉಡುಪಿ

ಸೌದಿಯಲ್ಲಿ ಹೃದಯಾಘಾತ: ಪಡುಬಿದ್ರಿ ಮೂಲದ ಉದ್ಯಮಿ ನಿಧನ

ಪಡುಬಿದ್ರಿ: ಪಡುಬಿದ್ರಿಯ ದೀನ್‍ಸ್ಟ್ರೀಟ್ ನಿವಾಸಿ, ದಿ. ಇದಿನಬ್ಬ ಅವರ ಪುತ್ರ ರಿಯಾಝ್ (46) ಅವರು ಸೌದಿ ಅರೇಬಿಯಾದ ಯಾಂಬು ನಗರದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು.

ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದು, ಬಳಿಕ ಸ್ವಂತ ಉದ್ಯಮ ಆರಂಭಿಸಿ ಯಶಸ್ವಿ ಉದ್ಯಮಿಯಾಗಿ ಗುರುತಿಸಿ ಕೊಂಡಿದ್ದರು. ಶುಕ್ರವಾರ ಹೃದಯಾಘಾತಕ್ಕೊಳಗಾಗಿ ಕೊನೆಯುಸಿರೆಳೆದಿದ್ದಾರೆ.

ಗುಂಡು ಹಾರಿಸಿಕೊಂಡು ಯುವಕ ಆತ್ಮಹತ್ಯೆ – vishwanews24

ಮೃತರು ತಾಯಿ, ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಪಡುಬಿದ್ರಿಯ ದೀನ್‍ದಸ್ಟ್ರೀಟ್‍ನ ಮುಹಮ್ಮದನ್ ಸ್ಪೋಟ್ರ್ಸ್ ಕ್ಲಬ್‍ನ ಸದಸ್ಯನಾಗಿದ್ದರು.

Leave a Reply