ಸ್ಫೋಟಕ ತುಂಬಿದ ಪೈನಾಪಲ್ ನೀಡಿ ಆನೆಯ ಹತ್ಯೆ ಪ್ರಕರಣ | ಓರ್ವನ ಬಂಧನ : vishwanews24

Featured, ರಾಷ್ಟ್ರ ನ್ಯೂಸ್

ಪಾಲಕ್ಕಾಡ್: ಅನಾನಸ್ ನಲ್ಲಿ ಸ್ಫೋಟಕ ತುಂಬಿಸಿ ಆನೆಗೆ ತಿನ್ನಿಸಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಪೊಲೀಸರು ಆರೋಪಿಯೋರ್ವನನ್ನು ಬಂಧಿಸಿದ್ದು, ಈ ಪ್ರಕರಣದಲ್ಲಿ ಇನ್ನುಳಿದ ಆರೋಪಿಗಳಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.

ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ವ್ಯಕ್ತಿಯು, ಕೆಲಸ ಮಾಡುತ್ತಿದ್ದ ತೋಟದ ಬಳಿಯಲ್ಲಿ ಆನೆ ಕಾಣಿಸಿಕೊಂಡಿತ್ತು ಎಂದು ಹೇಳಲಾಗಿದೆ. ಹೀಗಾಗಿ ಆನೆಗೆ ಪೈನಾಪಲ್ ತಿನ್ನಿಸಿರುವುದು ಈತನೇ ಎಂದು ಹೇಳಲಾಗಿದೆ. ಸದ್ಯದ ಮಾಹಿತಿ ಪ್ರಕಾರ ಆನೆಗೆ ಸ್ಫೋಟಕ ತುಂಬಿದ ಪೈನಾಪಲ್ ತಾನೇ ನೀಡಿರುವುದಾಗಿ ಆ ವ್ಯಕ್ತಿ ವಿಚಾರಣೆಯ ವೇಳೆ ಒಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಈ ಪ್ರಕರಣದಲ್ಲಿ ಹಲವರು ಭಾಗಿಯಾಗಿದ್ದಾರೆ ಎಂದು ಅರಣ್ಯ ಇಲಾಖೆ ಸಚಿವ ಕೆ.ರಾಜು ಅವರು ತಿಳಿಸಿದ್ದಾರೆ. ಈಗಾಗಲೇ ಆರೋಪಿಗಳ ಸುಳಿವನ್ನು ವಿಶೇಷ ತನಿಖಾ ಪಡೆ ಪತ್ತೆ ಹಚ್ಚಿದ್ದು, ಸಂಜೆ ಒಳಗೆ ಇನ್ನಷ್ಟು ಆರೋಪಿಗಳ ಬಂಧನವಾಗಲಿದೆ ಎಂದು ಅವರು ತಿಳಿಸಿದ್ದಾರೆ.