ಸ್ಯಾಂಡಲ್ ವುಡ್ ವತಿಯಿಂದ ನ. 16 ರಂದು ‘ಪುನೀತ್ ನಮನ’ ಬೃಹತ್ ಕಾರ್ಯಕ್ರಮ – VIshwanews24

Featured, ರಾಜ್ಯ ನ್ಯೂಸ್

ಸ್ಯಾಂಡಲ್ ವುಡ್ ವತಿಯಿಂದ ನ. 16 ರಂದು ‘ಪುನೀತ್ ನಮನ’ ಬೃಹತ್ ಕಾರ್ಯಕ್ರಮ – VIshwanews24

ಬೆಂಗಳೂರು: ಕನ್ನಡಿಗರ ಕಣ್ಮಣಿ ಪುನೀತ್ ರಾಜಕುಮಾರ್ ಕಣ್ಮರೆಯಾಗಿ ಇಂದಿಗೆ ಆರು ದಿವಸ ಸಂದಿವೆ. ಹೃದಯಾಘಾತದಿಂದ ನಿಧನರಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ನಮನ ಸಲ್ಲಿಸುವ ಉದ್ದೇಶದಿಂದ ನವೆಂಬರ್ 16 ರಂದು `ಪುನೀತ್ ನಮನ’ ಕಾರ್ಯಕ್ರಮವನ್ನು ಆಯೋಜಿಸಲು ತೀರ್ಮಾನಿಸಲಾಗಿದೆ.

ದೀಪಾವಳಿ ಹಬ್ಬದ ಶುಭಾಶಯ ಕೋರಿದ ಗಣ್ಯರು – Vishwanews24

ಸ್ಯಾಂಡಲ್ ವುಡ್ ವತಿಯಿಂದ ನಮನ ಸಲ್ಲಿಸುವ ಉದ್ದೇಶದಿಂದ ‘ಪುನೀತ್ ನಮನ’ ಕಾರ್ಯಕ್ರಮವನ್ನು ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಚಲನ‌ಚಿತ್ರ ವಾಣಿಜ್ಯ ಮಂಡಳಿ ಅದ್ಯಕ್ಷ ಜಯರಾಜ್ ಮಾಹಿತಿ ನೀಡಿದ್ದಾರೆ.

ನವೆಂಬರ್ 16ರಂದು ‘ಪುನೀತ್ ನಮನ’ ಕಾರ್ಯಕ್ರಮವು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಕರ್ನಾಟಕ ಸೇರಿದಂತೆ ಹಲವು ಚಿತ್ರೋದ್ಯಮದ ಗಣ್ಯರನ್ನ ಕರೆದು ಬೃಹತ್ ಕಾರ್ಯಕ್ರಮ‌ ಮಾಡುವ ಯೋಜನೆ ಇದೆ.

ದೀಪಾವಳಿ ಹಬ್ಬದ ಶುಭಾಶಯ ಕೋರಿದ ಗಣ್ಯರು – Vishwanews24

https://fb.watch/91_uf4AAFt/