ಸ್ವಾಮೀಜಿಗಳ ಗಣ್ಯರ ಉಪಸ್ಥಿತಿಯಲ್ಲಿ ಅದ್ಧೂರಿಯಾಗಿ ಲೋಕಾರ್ಪಣೆಗೊಂಡ ಗುರ್ಮೆ ಗೋವಿಹಾರ : vishwanews24

Featured, ಉಡುಪಿ

 ಸ್ವಾಮೀಜಿಗಳ ಗಣ್ಯರ ಉಪಸ್ಥಿತಿಯಲ್ಲಿ    ಅದ್ಧೂರಿಯಾಗಿ ಲೋಕಾರ್ಪಣೆಗೊಂಡ ಗುರ್ಮೆ ಗೋವಿಹಾರ : vishwanews24

ಕಾಪುಃ ಗೋವುಗಳಿಗೆ ವಿಹಾರತಾಣವೆಂಬ ಪರಿಕಲ್ಪನೆಯಲ್ಲಿ ಗುರ್ಮೆ ಫೌಂಡೇಶನ್ ವತಿಯಿಂದ ಶ್ರೀಮತಿ ಪದ್ಮಾವತಿ ಪಿ ಶೆಟ್ಟಿ ಗುರ್ಮೆ ಇವರ ನಾಲ್ಕನೇ ಪುಣ್ಯತಿಥಿಯ ಪ್ರಯುಕ್ತ “ಗುರ್ಮೆ ಗೋವಿಹಾರ” ಗಣ್ಯರ ಉಪಸ್ಥಿತಿಯಲ್ಲಿ ಲೋಕಾರ್ಪಣೆಗೊಂಡಿತು.
ಕೀರ್ತನ -ಸಾಂತ್ವನ-ಯಕ್ಷಗಾನ ಎಂಬ ಶೀರ್ಷಿಕೆಯಡಿಯಲ್ಲಿ ಪದ್ಮಾವತಿ ಪ್ರಭಾಕರ ಶೆಟ್ಟಿ ಸಭಾವೇದಿಕೆಯಲ್ಲಿ ಸಚಿವರಾದ ಕೆ.ಎಸ್ ಈಶ್ವರಪ್ಪ ದೀಪ ಬೆಳಗಿಸುವ ಮುಖೇನ ಕಾರ್ಯಕ್ರಮ ಉದ್ಘಾಟಿಸಿ ಉದ್ಘಾಟನ ಭಾಷಣ ಮಾಡಿದರು.


ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಸ್ವರ್ಣ ಪೀಠಿಕಾಪುರ ಗೌರಿಗದ್ದೆಯ ಶ್ರೀ ವಿನಯಗುರೂಜಿಯವರು ಆಶೀರ್ವಚನ ಮಾಡಿದರು.

ಈ ಸಂಧರ್ಭದಲ್ಲಿ 550 ಕ್ಕಿಂತ ಅಧಿಕ ಮಂದಿಗೆ ವೈದ್ಯಕೀಯ ನೆರವನ್ನು ಮತ್ತು 300 ಕ್ಕೂ ಅಧಿಕ ಆಶಾ ಕಾರ್ಯಕರ್ತೆ-ಆರೋಗ್ಯ ಕಾರ್ಯಕರ್ತರು, ಪೌರಕಾರ್ಮಿಕರಿಗೆ ಆಹಾರ ಕಿಟ್ ವಿತರಿಸಲಾಯಿತು.

ವೇದಿಕೆಯಲ್ಲಿ ಸಚಿವರಾದ ಸುನೀಲ್ ಕುಮಾರ್,ಕೋಟಾ ಶ್ರೀನಿವಾಸ ಪೂಜಾರಿ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ, ಕಾಪು ಶಾಸಕ ಲಾಲಾಜಿ ಆರ್ ಮೆಂಡನ್,    ರಘುಪತಿ ಭಟ್ ,   ಎಂ.ಆರ್ .ಜಿ ಗ್ರೂಪ್ ನ ಚೇಯರ್ ಮೇನ್ ಬಂಜರ ಪ್ರಕಾಶ ಶೆಟ್ಟಿ, ಗುರ್ಮೆ ಸುರೇಶ್ ಶೆಟ್ಟಿ ಹಾಗೂ ಸಹೋದರರು ಉಪಸ್ಥಿತರಿದ್ದರು.

Leave a Reply