ಹಲಾಲ್ ಸ್ವೀಕರಿಸುವುದು, ಬಿಡುವುದು ಜನರ ಇಚ್ಛೆಗೆ ಬಿಟ್ಟದ್ದು , ಇದರಲ್ಲಿ ಸರ್ಕಾರ ಮೂಗು ತೂರಿಸುವುದಿಲ್ಲ: ಬಿ.ಸಿ ನಾಗೇಶ್
ಹಲಾಲ್ ಎನ್ನುವುದು ಮುಸ್ಲಿಂರ ಧಾರ್ಮಿಕ ವಿಚಾರ..
ಹಲಾಲ್ ನಿಷೇಧದ ಬಗ್ಗೆ ಸರ್ಕಾರದ ಮುಂದೆ ಯಾವುದೇ ವಿಚಾರವಿಲ್ಲ. ಇದು ಸರ್ಕಾರದ ವ್ಯಾಪ್ತಿಗೂ ಬರುವುದಿಲ್ಲ.
ಯಾರಿಗೆ ಇಷ್ಟ ಇದೆ ಅವರು ಹಲಾಲ್ ಸ್ವೀಕರಿಸುತ್ತಾರೆ. ಯಾರಿಗೆ ಇಷ್ಟ ಇಲ್ಲ ಅವರು ಸ್ವೀಕರಿಸಲ್ಲ.
ಈ ವಿಷಯವನ್ನು ಜನರು ಎತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ತಮಗೆ ಬೇಕಾದ ವಿಷಯವನ್ನು ಎತ್ತುವ ಅಧಿಕಾರವಿದೆ..
ಈ ವಿಚಾರದಲ್ಲಿ ಅನಗತ್ಯ ಗೊಂದಲಗಳು ಬೇಡ..
ಮಡಿಕೇರಿ : ರಾಜ್ಯದಲ್ಲಿ ಆರಂಭವಾಗಿರುವ ಹಲಾಲ್ ವಿವಾದ ವಿಚಾರವಾಗಿ ಮಾತನಾಡಿರುವ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಹಲಾಲ್ ಸ್ವೀಕರಿಸುವುದು, ಬಿಡುವುದು ಜನರ ಇಚ್ಛೆಗೆ ಬಿಟ್ಟದ್ದು ಎಂದು ತಿಳಿಸಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿಕ್ಷಣ ಸಚಿವರು, ಹಲಾಲ್ ಎನ್ನುವುದು ಮುಸ್ಲಿಂರ ಧಾರ್ಮಿಕ ವಿಚಾರ.
ಹಲಾಲ್ನ್ನು ಇಷ್ಟವಿದ್ದವರು ಅಂಗಡಿಗಳಲ್ಲಿ ಸ್ವೀಕರಿಸುತ್ತಾರೆ. ಇಷ್ಟವಿಲ್ಲದವರು ಬೇರೆ ಅಂಗಡಿಗಳಲ್ಲಿ ಕೊಳ್ಳುತ್ತಾರೆ. ಇದನ್ನು ಜನರೇ ಮಾಡಿಕೊಂಡಿದ್ದಾರೆ ವಿನಃ ನಾವು ಮಾಡಿದ್ದಲ್ಲ. ಈ ವಿಷಯವನ್ನು ಜನರು ಎತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ತಮಗೆ ಬೇಕಾದ ವಿಷಯವನ್ನು ಎತ್ತುವ ಅಧಿಕಾರವಿದೆ. ಈ ವಿಷಯವನ್ನು ಸರ್ಕಾರವಾಗಲೀ, ಯಾವುದೇ ರಾಜಕೀಯ ಪಕ್ಷವಾಗಲೀ ಎತ್ತಿಲ್ಲ ಎಂದರು.
ಹಲಾಲ್ ಬಗ್ಗೆ ಮಾಧ್ಯಮಗಳಲ್ಲಿನ ಚರ್ಚೆಯಿಂದಾಗಿಯೇ ಇಂದು ಜನರಿಗೆ ಗೊತ್ತಾಗಿದೆ. ಹಲಾಲ್ ನಿಷೇಧದ ಬಗ್ಗೆ ಸರ್ಕಾರದ ಮುಂದೆ ಯಾವುದೇ ವಿಚಾರವಿಲ್ಲ. ಇದು ಸರ್ಕಾರದ ವ್ಯಾಪ್ತಿಗೂ ಬರುವುದಿಲ್ಲ.
ಸರ್ಕಾರದ ವ್ಯಾಪ್ತಿಗೆ ಬಾರದ ವಿಷಯದ ಬಗ್ಗೆ ಅನಗತ್ಯವಾಗಿ ಸರ್ಕಾರ ಮೂಗು ತೂರಿಸಲ್ಲ ಎಂದು ಸ್ಪಷ್ಟಪಡಿಸಿದರು.
