ಹಾಸನ : ಬಸ್‍ನಲ್ಲಿ ಪ್ರಯಾಣಿಸುತ್ತಿದ್ದಾಗ ಮರದ ಕೊಂಬೆ ಬಡಿದು ವ್ಯಕ್ತಿ ದಾರುಣ ಸಾವು – Vishwanews24

Featured, ರಾಜ್ಯ ನ್ಯೂಸ್

ಹಾಸನ : ಬಸ್‍ನಲ್ಲಿ ಪ್ರಯಾಣಿಸುತ್ತಿದ್ದಾಗ ಮರದ ಕೊಂಬೆ ಬಡಿದು ವ್ಯಕ್ತಿ ದಾರುಣ ಸಾವು

ಹಾಸನ: ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬನಿಗೆ ಮರದ ಕೊಂಬೆ ಬಡಿದು ಮೃತಪಟ್ಟ ಘಟನೆ ಬೇಲೂರಿನ   ನಿಡಗೋಡು ಗ್ರಾಮದ ಬಳಿ ನಡೆದಿದೆ.

ಬೇಲೂರಿನಿಂದ – ಮಂಗಳೂರು ಕಡೆಗೆ ಕೆಎ-45 ಎಫ್-0033 ನಂಬರ್‌ನ ಸಾರಿಗೆ ಬಸ್ ತೆರಳುತ್ತಿತ್ತು. ಈ ವೇಳೆ ಎದುರಿನಿಂದ ಬಂದ ಟಿಪ್ಪರ್‌ಗೆ ದಾರಿ ಬಿಡುವಾಗ ಈ ದುರ್ಘಟನೆ ಸಂಭವಿಸಿದೆ. ಮೃತನ ಗುರುತು ಪತ್ತೆಯಾಗಿಲ್ಲ. ವ್ಯಕ್ತಿಯ ಮೃತದೇಹವನ್ನು ಬೇಲೂರಿನ ತಾಲೂಕು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

ಶಿರ್ವ : ರಸ್ತೆಗೆ ಉರುಳಿಬಿದ್ದ ಮರ – ದ್ವಿಚಕ್ರ ವಾಹನ ಸವಾರನಿಗೆ ಗಾಯ – Vishwanews24

ಗ್ರಾಮದ ರಸ್ತೆ ಬದಿಯಲ್ಲಿಯೇ ಬೃಹತ್ ಗಾತ್ರದ ಹಲವಾರು ಮರಗಳಿವೆ. ಈ ರೀತಿಯಲ್ಲಿಯೇ ಮೂರ್ನಾಲ್ಕು ಸಾವುಗಳು ಸಂಭವಿಸಿವೆ. ಮರಗಳನ್ನು ತೆರವುಗೊಳಿಸುವಂತೆ ಮನವಿ ಮಾಡಿದ್ದರು ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಮರಗಳನ್ನು ತೆರವುಗೊಳಿಸಬೇಕು ಇಲ್ಲವಾದಲ್ಲಿ ರಸ್ತೆ ಬಂದ್ ಮಾಡಿ ಮರ ತೆರವು ಮಾಡುವುದಾಗಿ ಸ್ಥಳೀಯರ ಎಚ್ಚರಿಕೆ ನೀಡಿದ್ದಾರೆ.

ಸ್ಥಳಕ್ಕೆ ಬೇಲೂರು ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಮರು ತನಿಖೆಗೆ  ಸಿಎಂಗೆ ಮನವಿ ಸಲ್ಲಿಸಿದ ಶಾಸಕ ಪೂಂಜ – Vishwanews24

Leave a Reply