ಹಿಂದುಗಳ ನೋವಿಗೆ ಧ್ವನಿಯಾಗಲು ಕಾರ್ಕಳಕ್ಕೆ ಬಂದಿದ್ದೇನೆ , ಗುರುವಿಗಾಗಿ ಈ ಬಾರಿ ಕ್ಷೇತ್ರ ತ್ಯಾಗ ಮಾಡಿ : ಸಚಿವ ಸುನಿಲ್ ಕುಮಾರ್ ಗೆ ಮುತಾಲಿಕ್ ಮನವಿ – Vishwanews24

Featured, ಉಡುಪಿ

ಹಿಂದುಗಳ ನೋವಿಗೆ ಧ್ವನಿಯಾಗಲು ಕಾರ್ಕಳಕ್ಕೆ ಬಂದಿದ್ದೇನೆ , ಗುರುವಿಗಾಗಿ ಈ ಬಾರಿ ಕ್ಷೇತ್ರ ತ್ಯಾಗ ಮಾಡಿ : ಸಚಿವ ಸುನಿಲ್ ಕುಮಾರ್ ಗೆ ಮುತಾಲಿಕ್ ಮನವಿ

ಉಡುಪಿ : ಕಾರ್ಕಳದಲ್ಲಿ ಗುರುವಿಗಾಗಿ ಈ ಬಾರಿ ಕ್ಷೇತ್ರ ತ್ಯಾಗ ಮಾಡಿ ಎಂದು ಸಚಿವ ಸುನಿಲ್ ಕುಮಾರ್ ಗೆ ಮುತಾಲಿಕ್ ಮನವಿ ಮಾಡಿದ್ದಾರೆ.

ಮಂಗಳವಾರ ಕಾರ್ಕಳದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಪ್ರಮೋದ್‌ ಮುತಾಲಿಕ್‌ ಅವರು, ನಾನು ಕಾರ್ಕಳದಿಂದ ವಿಧಾನಸಭೆಗೆ ಸ್ಪರ್ಧಿಸುವುದಾಗಿ ಹೇಳಿದಾಗಿನಿಂದ ನನ್ನ ಬಗ್ಗೆ ಅಪಪ್ರಚಾರ ನಡೆಸಲಾಗುತ್ತಿದೆ. ಹಿಂದುತ್ವಕ್ಕಾಗಿ ನಾನು ಸಾಕಷ್ಟು ಆರೋಪಗಳನ್ನು ಎದುರಿಸಿದ್ದೇನೆ, ಸಂಕಷ್ಟ ಅನುಭವಿಸಿದ್ದೇನೆ. ಮುಖಕ್ಕೆ ಮಸಿ ಬಳಿಸಿಕೊಂಡಿದ್ದೇನೆ, ಅದಕ್ಕೆಲ್ಲ ಚುನಾವಣೆಯಲ್ಲಿ ಉತ್ತರ ನೀಡುತ್ತೇನೆ. ಸಂಘವು ನನಗೆ ರಾಷ್ಟ್ರಪ್ರೇಮ, ಹಿಂದುತ್ವದ ರಕ್ಷಣೆಯ ಪಾಠವನ್ನು ಕಲಿಸಿದೆ ಎಂದು ಹೇಳಿದರು.

ಮಂಗಳೂರು: ಪಂಪ್‌ವೆಲ್‌ ಬಳಿ ಪತ್ತೆಯಾದ ನೋಟುಗಳ ಕಂತೆ ತಮಗೆ ಸೇರಿದ್ದೆಂದು ಹೇಳಿಕೊಂಡು ಮೂವರು ಬಂದಿದ್ದಾರೆ : ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ – Vishwanews24

ಹಿಂದುಗಳ ನೋವಿಗೆ ಧ್ವನಿಯಾಗಲು ಕಾರ್ಕಳಕ್ಕೆ ಬಂದಿದ್ದೇನೆ. ನನಗೆ ಹಣ, ಆಸ್ತಿ ಮಾಡುವ ಉದ್ದೇಶವಿಲ್ಲ, ಆದ್ದರಿಂದ‌ ಬಾರಿ ಗುರುವಿಗಾಗಿ ಕ್ಷೇತ್ರ ತ್ಯಾಗ ಮಾಡಿʼʼ ಎಂದು ಪ್ರಮೋದ್‌ ಮುತಾಲಿಕ್‌ ಅವರು ಸಚಿವ ಸುನಿಲ್‌ ಕುಮಾರ್‌ಗೆ ಮನವಿ ಮಾಡಿದರು.

ತಮ್ಮ ಟೀಮ್‌ಗೆ ಟಿಕೆಟ್‌ ಕೊಟ್ಟರೂ ಕೊಡದಿದ್ದರೂ ಸ್ಪರ್ಧೆಗೆ ಇಳಿಯೋದು ಗ್ಯಾರಂಟಿ ಎಂದು ಹಠ ತೊಟ್ಟಿರುವ ಪ್ರಮೋದ್‌ ಮುತಾಲಿಕ್‌ ಅವರು ಇಂಧನ ಸಚಿವ ಹಾಗೂ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಸುನಿಲ್‌ ಕುಮಾರ್‌ ಅವರ ಮುಂದೆ ಒಂದು ಬೇಡಿಕೆ ಇಟ್ಟಿದ್ದಾರೆ.

ಮತಾಂತರ ತಡೆ ಕಾಯ್ದೆಯಲ್ಲೇ ಲವ್ ಜಿಹಾದ್ ತಡೆಯುವ ಅಂಶಗಳು ಸೇರಿವೆ , ಪ್ರತ್ಯೇಕ ಕಾನೂನು ಅಗತ್ಯ ಇಲ್ಲ:  ಆರಗ ಜ್ಞಾನೇಂದ್ರ – Vishwanews24

Leave a Reply