ಹಿಂದುಗಳು ಗಣೇಶೋತ್ಸವ ಆಚರಿಸಲು ಅನುಮತಿಗಾಗಿ ನಾಯಿಗಳಂತೆ ಅಲೆದಾಡಬೇಕಿದೆ : ಬಿಜೆಪಿ ಶಾಸಕ ಜ್ಯೋತಿ ಗಣೇಶ್ -Vishwanews24

Featured, ಜಿಲ್ಲೆ, ರಾಜ್ಯ ನ್ಯೂಸ್

ತುಮಕೂರು: ನಮ್ಮ ದೇಶದಲ್ಲಿ ಹಿಂದುಗಳು ಗಣೇಶೋತ್ಸವ ಆಚರಿಸಲು ಅನುಮತಿಗಾಗಿ ನಾಯಿಗಳಂತೆ ಅಲೆದಾಡಬೇಕಿದೆ ಎಂದು ಬಿಜೆಪಿ ಶಾಸಕ ಜ್ಯೋತಿ ಗಣೇಶ್ ಗುರುವಾರ ಹೇಳಿದ್ದಾರೆ.

ನಗರದ ಗಣೇಶೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಇನ್ಮುಂದೆ ಇದೆಲ್ಲಾ ಮುಂದುವರಿಯಬಾರದು. ಎಲ್ಲಾ ಇಲಾಖೆಯ ಅನುಮತಿ ಒಂದೇ ಕಡೆ ಸಿಗುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಹಬ್ಬಕ್ಕೆ ಬೇಕಾಗುವ ಎಲ್ಲಾ ಪರವಾನಗಿಗಳು ಒಂದೇ ಕಡೆ ಸಿಗುವಂತೆ ಮಾಡಬೇಕು. ಇಲ್ಲದಿದ್ದರೆ ಅಧಿಕಾರಿಗಳ ವಿರುದ್ದ ಮುಖ್ಯಮಂತ್ರಿಗಳಿಗೆ ಹೇಳಿ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಅಧಿಕಾರಿಗಳಿಗೆ ತುಮಕೂರು ನಗರ ಶಾಸಕ ಜ್ಯೋತಿಗಣೇಶ್ ಖಡಕ್ ವಾರ್ನಿಂಗ್ ಕೊಟ್ಟರು.

ಅನುಮತಿ ನೆಪದಲ್ಲಿ ಯಾವುದೇ ಗಣೇಶೋತ್ಸವ ಸಮಿತಿಯವರನ್ನು ಅಲೆದಾಡಿಸಿದರೆ ಶಿಸ್ತು ಕ್ರಮಕ್ಕೆ ಸರಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಶಾಸಕ ಜ್ಯೋತಿ ಗಣೇಶ್‌ ಇದೇ ವೇಳೆ ಎಚ್ಚರಿಕೆ ನೀಡಿದರು.

ಈಗ ಇರೋದು ಬೇರೆ ಯಾವುದೋ ಸರ್ಕಾರ ಇಲ್ಲ, ಬಿಜೆಪಿ ಸರ್ಕಾರ ಇರೋದು. ಅಧಿಕಾರಿಗಳು ಇದನ್ನು ಕುರಿತು ಕೆಲಸ ಮಾಡಬೇಕು ಎಂದು ಶಾಸಕ ಜ್ಯೋತಿಗಣೇಶ್ ಹೇಳಿದರು.