ಹಿಂದುತ್ವದ ಪರವಾದ ಶಕ್ತಿ ಕಾಂಗ್ರೆಸ್ ಗೆ ಖಂಡಿತ ಬುದ್ದಿ ಕಲಿಸುತ್ತದೆ , ಲೋಕಸಭಾ ಚುನಾವಣೆಯಲ್ಲಿ ಇದಕ್ಕೆ ಜನರೇ ಉತ್ತರ ನೀಡುತ್ತಾರೆ : ಬಿ.ವೈ.ರಾಘವೇಂದ್ರ – Vishwanews24
ಹಿಂದುತ್ವದ ಪರವಾದ ಶಕ್ತಿ ಕಾಂಗ್ರೆಸ್ ಗೆ ಖಂಡಿತ ಬುದ್ದಿ ಕಲಿಸುತ್ತದೆ , ಲೋಕಸಭಾ ಚುನಾವಣೆಯಲ್ಲಿ ಇದಕ್ಕೆ ಜನರೇ ಉತ್ತರ ನೀಡುತ್ತಾರೆ : ಬಿ.ವೈ.ರಾಘವೇಂದ್ರ
ಶಿವಮೊಗ್ಗ: ಹನುಮ ಧ್ವಜ ಹಾಕುವ ವಿಚಾರದಲ್ಲಿ ಚರ್ಚೆಗಳು, ಎಳೆದಾಟಗಳು ನಡೆಯುತ್ತಿವೆ. ಬಂದ್ ಪರಿಸ್ಥಿತಿಗೆ ಹೋಗಬಾರದು. ಸರ್ಕಾರದಿಂದ ಹಿಂದೂಗಳ ಮನಸ್ಥಿತಿ ತುಳಿಯುವ ಕೆಲಸವಾಗುತ್ತಿದೆ. ತುಷ್ಟಿಕರಣ ರಾಜಕೀಯದಿಂದ ಅಲ್ಪಸಂಖ್ಯಾತರ ಮತ ಪಡೆಯಬಹುದೆಂದು ಕಾಂಗ್ರೆಸ್ ನವರು ಎಂದುಕೊಂಡಿದ್ದಾರೆ. ಕಾಂಗ್ರೆಸ್ ನವರು ತಮ್ಮ ತಪ್ಪನ್ನ ತಿದ್ದುಕೊಳ್ಳಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂಗಳ ವಿರುದ್ಧ ನಡೆದುಕೊಳ್ಳುವುದನ್ನು ಕಾಂಗ್ರೆಸ್ ನವರು ಬಿಡಬೇಕು. ಹೀಗೆ ಮಾಡಿ ಪಾರ್ಲಿಮೆಂಟ್ ನಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನ ಕೂಡ ಇಲ್ಲವಾಗುತ್ತದೆ. ಹಿಂದೂಗಳ ಮನಸ್ಥಿತಿಗೆ ವಿರೋಧವಾಗಿ ನಡೆದುಕೊಳ್ಳುವ ಪ್ರಯತ್ನ ನಡೆಯಿತು. ಹಿಂದುತ್ವವನ್ನು ತುಳಿಯುವ ಕೆಲಸ ಆಗಬಾರದು, ಹಿಂದುತ್ವದ ಪರವಾದ ಶಕ್ತಿ ಖಂಡಿತ ಬುದ್ದಿ ಕಲಿಸುತ್ತದೆ. ಲೋಕಸಭಾ ಚುನಾವಣೆಯಲ್ಲಿ ಇದಕ್ಕೆ ಜನರೇ ಉತ್ತರ ನೀಡುತ್ತಾರೆ ಎಂದರು.
ನಿವೃತ್ತಿಗೆ ಎರಡು ತಿಂಗಳು ಬಾಕಿ ಇರುವಾಗಲೇ ಹಿರಿಯ ಐಪಿಎಸ್ ಅಧಿಕಾರಿ ಪ್ರತಾಪ್ ರೆಡ್ಡಿ ರಾಜೀನಾಮೆ – Vishwanews24
ಡಿ.ಕೆ.ಸುರೇಶ್ ಹೇಳಿಕೆಯಿಂದ ಆಶ್ಚರ್ಯವಾಗಿದೆ. ನಾಚಿಕೆಯಾಗಬೇಕು, ಇದೇ ರೀತಿ ಹೇಳಿ ತುರ್ತು ಪರಿಸ್ಥಿತಿ ತಂದು ಅದರ ಶಾಪದಿಂದ ಇವತ್ತು ವಿರೋಧ ಪಕ್ಷದಲ್ಲಿ ಕೂರದಷ್ಟು ಪರಿಸ್ಥಿತಿ ಕಾಂಗ್ರೆಸ್ ಗೆ ಬಂದಿದೆ. ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ಈ ರೀತಿ ಹೇಳಿಕೆ ನೀಡಿದಾಗ ಅವರ ಪಕ್ಷದ ನಾಯಕರು ಕಿವಿ ಹಿಂಡಬೇಕು ಕಾಂಗ್ರೆಸ್ ನವರ ಪಾಪದ ಕೊಡ ತುಂಬುತ್ತಿದೆ. ಅವರ ತಪ್ಪಿನ ಅರಿವನ್ನು ಮಾಡಿಕೊಳ್ಳದೆ ಹೊದರೆ ಲೋಕಸಭಾ ಚುನಾವಣೆಯಲ್ಲಿ ಉತ್ತರ ಸಿಗುತ್ತದೆ ಎಂದು ರಾಘವೇಂದ್ರ ಹೇಳಿದರು.
