ಹಿಂದೂ ಹುಡುಗಿಯರ ಮೈಮುಟ್ಟಿದವರ ಕೈ ಕತ್ತರಿಸಿ : ಅನಂತ್ ಕುಮಾರ್ ಹೆಗ್ಡೆ – Vishwanews24

Featured, ರಾಜ್ಯ ನ್ಯೂಸ್

ಕೊಡಗುಬಿಜೆಪಿ ಪಕ್ಷದ ಮುಖಂಡ ಹಾಗೂ ಕೇಂದ್ರ ಕೌಶಲಾಭಿವೃದ್ಧಿ ಸಚಿವರೂ ಆಗಿರುವ ಅನಂತ್ ಕುಮಾರ್ ಹೆಗ್ಡೆ ಪ್ರಚೋದನಕಾರಿ ಮತ್ತು ವಿವಾದಾತ್ಮಕ ಹೇಳಿಕೆಗಗಳಿಗೆ ಕುಖ್ಯಾತಿ ಪಡೆದವರು. ಹಿಂದೂ ಹುಡುಗಿಯರ ಮೈಮುಟ್ಟಿದವರ ಕೈಯನ್ನು ಕಡಿಯಿರಿ ಎಂದು ಪ್ರಚೋದನಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

ಕೊಡಗಿನ ಮಾದಾಪುರದಲ್ಲಿ ನಡೆದ ಹಿಂದೂ ಐಕ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಶಬರಿಮಲೆಗೆ ಪ್ರವೇಶಿಸಿದ್ದ ಮಹಿಳೆಯರು ಕೊಡಗಿನಲ್ಲಿ ತಂಗಿದ್ದರು ಎಂಬ ಮಾಹಿತಿ ಇದೆ. ಅಂತಹ ದೇಶದ್ರೋಹಿಗಳು ಮುಂದೆ ಕೊಡಗಿಗೆ ಭೇಟಿ ಕೊಟ್ಟರೆ ಇಲ್ಲಿಯೇ ಮಣ್ಣಾಗಿಸಿ ಎಂದು ಕರೆ ನೀಡಿದ್ಧಾರೆ.

ದೇವರಿಗೆ ಯಾರೂ ಆನೆ, ಹುಲಿಯನ್ನು ಬಲಿಕೊಡುವುದಿಲ್ಲ. ದುರ್ಬಲವಾದ ಕುರಿ-ಕೋಳಿಗಳನ್ನೇ ಬಲಿ ಕೊಡೋದು, ನೀವು ಕುರಿ-ಕೋಳಿಗಳಾಗಬೇಡಿ ಎಂದು ಕರೆ ನೀಡಿದ್ದಾರೆ. ಐತಿಹಾಸಿಕ ಕಟ್ಟಡಗಳಾದ ಕುತುಬ್ ಮಿನಾರ್, ತಾಜ್ ಮಹಲ್ ಗಳ ಬಗ್ಗೆಯೂ ಅನಂತ್ ಕುಮಾರ್ ಹೆಗ್ಡೆ ಮಾತನಾಡಿದ್ದು, ಕುತುಬ್ ಮಿನಾರ್ ಕಟ್ಟಿದ್ದು ಮುಸಲ್ಮಾನರಲ್ಲ ಅದು ನಿರ್ಮಾಣವಾಗಿದ್ದು ಜೈನರ ಕಾಲದಲ್ಲಿ. ತಾಜ್ ಮಹಲ್ ನ್ನು ರಾಜಾ ಜಯಸಿಂಹನಿಂದ ಖರೀದಿಸಿದ ಕಟ್ಟಡ ಅದಾಗಿತ್ತು ಜಯಸಿಂಹನಿಂದ ಖರೀದಿಸಿದ ಬಳಿಕ ತೇಜೋ ಮಹಾಲಯ ತಾಜ್ ಮಹಲ್ ಆಯ್ತು ಎಂದು ಅನಂತ್ ಕುಮಾರ್ ಹೆಗ್ಡೆ ಹೇಳಿದ್ದಾರೆ.

ಇತಿಹಾಸವನ್ನು ನಾವೀಗ ಬರೆಯುತ್ತೇವೆ, ನಾವು ಬರೆದದ್ದೇ ಇತಿಹಾಸ ಎಂದು ಹೆಗಡೆ ಅವರು ಸಭೆಯ ಕರಾಡತನದ ನಡುವೆ ಹೇಳಿದರು.