ಹಿಜಬ್‌ಗೆ ಅವಕಾಶ :ಪ್ರಣಾಳಿಕೆಯಲ್ಲಿ ಸಮಾನತೆಯ ಮಾತು ಕೊಟ್ಟಿದ್ವಿ , ಯಾವುದೇ ಕಾರಣಕ್ಕೂ ಆದೇಶ ವಾಪಸ್ ಪಡೆಯಲ್ಲ : ಮಧು ಬಂಗಾರಪ್ಪ – vishwanews24

Featured, ರಾಜ್ಯ ನ್ಯೂಸ್

ಹಿಜಬ್ ಬಗ್ಗೆ ಮಾತಾಡುವ ಬಿಜೆಪಿಯವರು  ನೀಟ್ ಬಗ್ಗೆ ಮಾತಾಡಲಿ : ಮಧು ಬಂಗಾರಪ್ಪ ಆಕ್ರೋಶ

ಬೆಂಗಳೂರು: ಹಿಜಬ್ ಬಗ್ಗೆ ಮಾತಾಡುವ ಬಿಜೆಪಿಯವರು  ನೀಟ್ ಬಗ್ಗೆ ಮಾತಾಡಲಿ, 25 ಲಕ್ಷ ಮಕ್ಕಳ ಕಾಲಡಿಗೆ ನುಸುಳಿ ಬರಲಿ ಆಗ ಈ ಆದೇಶದ ಬಗ್ಗೆ ಉತ್ತರಿಸ್ತಿನಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಆಕ್ರೋಶ ಹೊರಹಾಕಿದ್ದಾರೆ.

ಹಿಜಬ್‌ಗೆ ಶಾಲಾ-ಕಾಲೇಜುಗಳಲ್ಲಿ ಅವಕಾಶ ಕೊಟ್ಟಿದ್ದನ್ನು ಬಿಜೆಪಿಯವರು ರಾಜಕೀಯವಾಗಿ ಬಳಸಿಕೊಂಡು ಅಲ್ಪಸಂಖ್ಯಾತರ ಓಲೈಸಲು ಮಾಡಿದ್ದಾರೆ ಎಂಬ ಆರೋಪದ ಬಗ್ಗೆ ಮಾತನಾಡಿದ ಅವರು, ಹಿಜಬ್ ಮಾತ್ರ ಅಲ್ಲ. ಇದಕ್ಕೂ ಮುನ್ನ ನಾನು ಶಿವದಾರ ಹಾಗೂ ಜನಿವಾರದ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದೆ, ಹಾಗಾದ್ರೆ ಇವರೆಲ್ಲ ಅದರ ವಿರೋಧಿಗಳಾ?, ಕಣ್ಣಿಗೆ ಇದೊಂದೇ ಕಾಣಿಸುತ್ತಾ? ಇದರ ಬಗ್ಗೆ ಮಾತಾಡೋರು ನೀಟ್ ಪರೀಕ್ಷೆ ಬಗ್ಗೆ ಮಾತಾಡಲಿ. ನೀಟ್ ಪಶ್ನೆಪತ್ರಿಕೆ ಲೀಕ್‌ನಿಂದಾಗಿ 25 ಲಕ್ಷ ಮಕ್ಕಳನ್ನು ಬೀದಿಗೆ ತಂದಿದ್ದಾರಲ್ಲ, ಅವರ ಕಾಲಡಿಗೆ ನುಸುಳಿ ಬರಲಿ, ಆಗ ಈ ಆದೇಶದ ಬಗ್ಗೆ ಉತ್ತರ ಕೊಡುತ್ತೇನೆಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: 

ಹಿಜಾಬ್‌ಗೆ ಅನುಮತಿ : ಸಾಮಾಜಿಕ ಸಾಮರಸ್ಯವನ್ನು ಕದಡುವುದೇ ಸಿದ್ದರಾಮಯ್ಯ ಸರ್ಕಾರದ ಕಸುಬಾಗಿ ಬಿಟ್ಟಿದೆ : ಸುನಿಲ್ ಕುಮಾರ್ ಆಕ್ರೋಶ – vishwanews24

ಪ್ರಣಾಳಿಕೆಯಲ್ಲಿ ಸಮಾನತೆಯ ಮಾತು ಕೊಟ್ಟಿದ್ವಿ, ಜಾತಿ, ಧರ್ಮ ಓಲೈಸುವ ಮಾತಲ್ಲ. ಅದರಂತೆ ಮಾಡ್ತಾ ಇದ್ದೇವೆ. ಯಾವುದೇ ಕಾರಣಕ್ಕೂ ಆದೇಶ ವಾಪಸ್ ಪಡೆಯಲ್ಲ. ಬಿಜೆಪಿ ನಾಯಕರು, ವಿರೋಧ ಮಾಡೋರು ಕೇಂದ್ರೀಯ ವಿದ್ಯಾಲಯದ ಮುಂದೆ ವಿರೋಧಿಸಲಿ. ಮಹಾರಾಷ್ಟ್ರದಲ್ಲಿ ಹೋಗಿ ಪ್ರತಿಭಟನೆ ಮಾಡಲಿ. ಕೇಂದ್ರ ಸರ್ಕಾರ ಮಾಡಿರುವ ಕಾನೂನನ್ನೇ ನಾನು ಈಗ ತಂದಿದ್ದೇನೆ. ಇದೇನು ಹೊಸದಲ್ಲ. ಜಾಸ್ತಿ ಫಲಿತಾಂಶ ಬಂತು ಅಂತ ಹೊಟ್ಟೆ ಕಿಚ್ಚಿಗೆ ಇವರೆಲ್ಲ ಹೀಗೆ ಮಾಡ್ತಿದ್ದಾರೆ. ಯಾರ ಓಲೈಕೆಗೆ ಆದೇಶ ಮಾಡಿಲ್ಲ. ಮಕ್ಕಳ ಹಿತದೃಷ್ಟಿಯಿಂದ ಆದೇಶ ಮಾಡಿದ್ದೇನೆ, ವಾಪಸ್ ಪಡೆಯಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ಮಧ್ಯಪ್ರಾಚ್ಯ ಬಿಕ್ಕಟ್ಟು: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುವ ಸಾಧ್ಯತೆ : ಆರ್‌ಬಿಐ ಗವರ್ನರ್ -vishwanews24

Leave a Reply