ಹಿಜಾಬ್ ವಿವಾದ : ನಾವು ಭಾರತದ ಹೆಣ್ಣುಮಕ್ಕಳ ಭವಿಷ್ಯವನ್ನು ದೋಚುತ್ತಿದ್ದೇವೆ : ರಾಹುಲ್ ಗಾಂಧಿ ಆಕ್ರೋಶ – Vishwanews24

Featured, ರಾಷ್ಟ್ರ ನ್ಯೂಸ್

ಹಿಜಾಬ್ ವಿವಾದ : ನಾವು ಭಾರತದ ಹೆಣ್ಣುಮಕ್ಕಳ ಭವಿಷ್ಯವನ್ನು ದೋಚುತ್ತಿದ್ದೇವೆ : ರಾಹುಲ್ ಗಾಂಧಿ ಆಕ್ರೋಶ – Vishwanews24

ಹೊಸದಿಲ್ಲಿ:  ಉಡುಪಿ ಜಿಲ್ಲೆಯ ಕುಂದಾಪುರದ ಸರ್ಕಾರಿ ಪಿಯು ಕಾಲೇಜಿನಲ್ಲಿ ಹಿಜಾಬ್ ಧರಿಸಿದ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಕಾಲೇಜಿಗೆ ಪ್ರವೇಶ ನಿರಾಕರಿಸಿದ ಘಟನೆ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶನಿವಾರ ಸರಸ್ವತಿ ಪೂಜೆಯ ಸಂದರ್ಭದಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಹಿಜಾಬ್ ಧರಿಸಿದ ಮಕ್ಕಳಿಗೆ ತರಗತಿಯೊಳಗೆ ಪ್ರವೇಶ ನೀಡದ ಕಾಲೇಜು ಸಿಬ್ಬಂದಿಯ ನಿರ್ಧಾರವನ್ನು ಖಂಡಿಸಿದ್ದಾರೆ. ‘ನಾವು ಭಾರತದ ಹೆಣ್ಣುಮಕ್ಕಳ ಭವಿಷ್ಯವನ್ನು ದೋಚುತ್ತಿದ್ದೇವೆ’ ಎಂದು ಕಿಡಿಕಾರಿದ್ದಾರೆ.

https://fb.watch/aZU70AdwBO/

‘ವಿದ್ಯಾರ್ಥಿಗಳ ಶಿಕ್ಷಣದ ನಡುವೆ ಹಿಜಾಬ್ ಪ್ರವೇಶಿಸಲು ಬಿಡುವ ಮೂಲಕ ನಾವು ಭಾರತದ ಹೆಣ್ಣುಮಕ್ಕಳ ಭವಿಷ್ಯವನ್ನು ದೋಚುತ್ತಿದ್ದೇವೆ. ಸರಸ್ವತಿ ಮಾತೆ ಎಲ್ಲರಿಗೂ ಜ್ಞಾನವನ್ನು ನೀಡಲಿ. ಆಕೆ ಭೇದ ಮಾಡುವುದಿಲ್ಲ’ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

ಮಂಗಳೂರು :ವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವವರು ಮಸೀದಿ ಒಳಗೆ ಮಹಿಳೆಯರಿಗೆ ಪ್ರವೇಶ ಕೊಡಲಿ : ಸುನಿಲ್ ಕುಮಾರ್ – Vishwanews24

Leave a Reply