ಹಿರಿಯ ಸಹಕಾರಿ ಅಭಿಯೋಜಕ ಮಾರುತಿ ಡೊಂಕಣ್ಣ ಮಾಂಗ್ಲಿ ಇನ್ನಿಲ್ಲ -Vishwanews24
ಮಂಗಳೂರು: ಇಲ್ಲಿನ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ಮಾರುತಿ ಟೊಂಕಣ್ಣ ಮಾಂಗ್ಲಿ (52 ವರ್ಷ) ಹೃದಯಾಘಾತದಿಂದಾಗಿ ಕೊನೆಯುಸಿರೆಳೆದಿದ್ದಾರೆ.
ಉತ್ತರ ಕನ್ನಡದ ಹಳಿಯಾಳದಲ್ಲಿ ವಕೀಲರಾಗಿ ಸೇವೆ ಆರಂಭಿಸಿದ ಮಾರುತಿ 2010ಕ್ಕೆ ಸರ್ಕಾರಿ ಸೇವೆಗೆ ಸೇರಿದ್ದರು. ಉತ್ತರ ಕನ್ನಡದಲ್ಲಿ ವಿವಿಧ ನ್ಯಾಯಾಲಯಗಳಲ್ಲಿ ಸೇವೆ ಸಲ್ಲಿಸಿದದ್ದರು.
ಮಾರುತಿ ಟೊಂಕಣ್ಣ ಮಾಂಗ್ಲಿ ಅವರು 2016ರ ಜೂನ್ ನಲ್ಲಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರಾಗಿ ಮಂಗಳೂರಿನಲ್ಲಿ ಸೇವೆ ಆರಂಭಿಸಿದರು. ಮಿತಭಾಷಿ, ಕಠಿಣ ಪರಿಶ್ರಮಿ ಹಾಗೂ ಕಾನೂನು ಬಗ್ಗೆ ಆಳವಾದ ತಿಳುವಳಿಕೆ ಹೊಂದಿದ್ದರು. ಕೆಲ ದಿನಗಳ ಹಿಂದಷ್ಟೇ ಸರ್ಕಾರಿ ಅಭಿಯೋಜಕರಾಗಿ ಪದೋನ್ನತಿ ಹೊಂದಿದ್ದರು. ಹುದ್ದೆ ಖಾಲಿ ಇಲ್ಲದ ಕಾರಣ ವರ್ಗಾವಣೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು.
ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿರುವ ಮಾಂಗ್ಲಿ ಅವರ ಅಕಾಲಿಕ ಸಾವಿಗೆ ಮಂಗಳೂರು ವಕೀಲರ ಸಂಘ ಅತೀವ ಸಂತಾಪಗಳನ್ನು ಸೂಚಿಸಿದೆ.
ಅವರ ಪುತ್ರ ಎಲ್ ಎಲ್ ಬಿ ಪದವಿಯನ್ನು ಮುಗಿಸಿದ್ದು, ಈಗಷ್ಟೇ ವಕೀಲರಾಗಿ ಕಾನೂನು ಸೇವೆ ಆರಂಭಿಸಿದ್ದರು.
ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.
ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್
8088827292
