ಹೃದಯಾಘಾತ – 29 ವರ್ಷದ ಯುವಕ ಸಾವು – vishwanews24
ಚಿಕ್ಕಮಗಳೂರು : ಹೃದಯಾಘಾತ – 29 ವರ್ಷದ ಯುವಕ ಸಾವು
ಚಿಕ್ಕಮಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಹಠಾತ್ ಸಾವಿನ ಪ್ರಕರಣಗಳು ತೀವ್ರ ಆತಂಕಕ್ಕೆ ಕಾರಣವಾಗಿದೆ. ಇದರ ನಡುವೆ ಜಿಲ್ಲೆಯಲ್ಲಿ 29 ವರ್ಷ ಪ್ರಾಯದ ತೆಂಗಿನಕಾಯಿ ವ್ಯಾಪಾರಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ತರೀಕೆರೆ ತಾಲೂಕಿನ ಶಿವನಿ ಗ್ರಾಮದ 29 ವರ್ಷದ ಹರೀಶ್ ಮೃತ ಯುವಕ.
ಮಂಗಳೂರು: ವಿವಿಧ ಸಾರ್ವಜನಿಕ ಕಾರ್ಯಕ್ರಮ, ಮೆರವಣಿಗೆಗಳ ಆಚರಣೆ : ಷರತ್ತು ವಿಧಿಸಿದ ಪೊಲೀಸ್ ಇಲಾಖೆ – vishwanews24
ತೆಂಗಿನಕಾಯಿ ವ್ಯಾಪಾರ ಮಾಡಿಕೊಂಡಿದ್ದ ಹರೀಶ್ ಗುರುವಾರ (ಜು.03) ಬೆಳಗಿನ ಜಾವ 2.30ಕ್ಕೆ ವಾಂತಿ ಮಾಡಿಕೊಂಡಿದ್ದರು. ಗ್ಯಾಸ್ಟ್ರಿಕ್ ಆಗಿರಬಹುದು ಎಂದು ಮನೆಯವರು ಮಾತ್ರೆ ನುಂಗಿಸಿ ಮಲಗಿಸಿದ್ದರು. ಅದರೆ 3.30ಕ್ಕೆ ಮತ್ತೆ ವಾಂತಿಯಾಗಿ ಕುಸಿದು ಬಿದ್ದಿದ್ದರು. ಅಜ್ಜಂಪುರ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಸಾವನ್ನಪ್ಪಿದ್ದಾರೆ.
ಅವಿವಾಹಿತರಾಗಿದ್ದ ಹರೀಶ್ ಅವರು ತೆಂಗಿನಕಾಯಿ ವ್ಯಾಪಾರದ ಜೊತೆ ತೋಟ ನೋಡಿಕೊಳ್ಳುತ್ತಿದ್ದರು.
ಉಡುಪಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿ ರೋಹಿಣಿ ಸಿಂಧೂರಿ ನೇಮಕ – vishwanews24
