ಹೃದಯಾಘಾತದಿಂದ ಆರ್.ಜೆ ರಚನಾ ನಿಧನ – Vishwanews24
ಹೃದಯಾಘಾತದಿಂದ ಆರ್.ಜೆ ರಚನಾ ನಿಧನ – Vishwanews24
ಬೆಂಗಳೂರು: ರೇಡಿಯೋ ಮಿರ್ಚಿಯಲ್ಲಿ ಹಲವಾರು ವರ್ಷ ರೆಡಿಯೋ ಜಾಕಿಯಾಗಿ ಕೆಲಸ ಮಾಡುತ್ತಿದ್ದ ಮಾತಿನ ಮಲ್ಲಿ ಆರ್.ಜೆ. ರಚನಾ(39) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಇನ್ನು ಕಳೆದ 7 ವರ್ಷಗಳಿಂದ ರೆಡಿಯೋ ಜಾಕಿ ಕೆಲಸವನ್ನು ತೊರೆದಿದ್ದ ಅವರು ಮನೆಯಲ್ಲೇ ಏಕಾಂಗಿಯಾಗಿದ್ದು ಡಿಪ್ರೆಷನ್, ಮಾನಸಿಕ ಒತ್ತಡಗಳಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇದೇ ಹಿನ್ನಲೆಯಲ್ಲಿ ಹೃದಾಯಘಾತಕ್ಕೆ ಒಳಗಾಗಿರಬಹುದು ಎಂದು ಶಂಕಿಸಲಾಗಿದೆ.
ಡಯೆಟ್, ಸದಾ ಹಸನ್ಮುಖಿಯಾಗಿಯೇ ಇರುತ್ತಿದ್ದ ಮತ್ತು ಆರೋಗ್ಯದ ಬಗ್ಗೆ ಸಾಕಷ್ಟು ಕಾಳಜಿ ತಗೆದುಕೊಳ್ಳುತ್ತಿದ್ದ ರಚನಾ ಸಾವು ಅವರ ಸ್ನೇಹಿತರ ಬಳಗಕ್ಕೆ ತೀವ್ರ ಆಘಾತ ಮೂಡಿಸಿದೆ.
