ಹೆಬ್ರಿ : ಕೂಡ್ಲು ಫಾಲ್ಸ್ ನ ಬಂಡೆಯ ಮೇಲಿನಿಂದ ಬಿದ್ದು ಯುವಕ ಸಾವು – vishwanews24
ಹೆಬ್ರಿ : ಕೂಡ್ಲು ಫಾಲ್ಸ್ ನ ಬಂಡೆಯ ಮೇಲಿನಿಂದ ಬಿದ್ದು ಯುವಕ ಸಾವು
ಹೆಬ್ರಿ: ಇಲ್ಲಿಗೆ ಸಮೀಪದ ಪ್ರವಾಸಿ ತಾಣ ಕೂಡ್ಲು ಫಾಲ್ಸ್ ನಲ್ಲಿನ ಬಂಡೆಯ ಮೇಲಿನಿಂದ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ವರದಿಯಾಗಿದೆ.
ಮೃತರನ್ನು ಉಡುಪಿಯ ಕೊಂಜಾಡಿ ಮೂಲದ ಬೆಂಗಳೂರು ನಿವಾಸಿ ಸವಿತಾ ಪಿ. ಶೆಟ್ಟಿ ಎಂಬವರ ಮಗ ಮನ್ವಿತ್ (25) ಎಂದು ಗುರುತಿಸಲಾಗಿದೆ.
ಮನ್ವಿತ್ ಡಿ.12ರಂದು ತಮ್ಮ ಸ್ವಂತ ಮನೆಯಾದ ಕೊಂಜಾಡಿಗೆ ಬಂದಿದ್ದು, ಡಿ.14ರಂದು ತನ್ನ ಸ್ನೇಹಿತರೊಂದಿಗೆ ಹೆಬ್ರಿಯ ಕೂಡ್ಲು ಫಾಲ್ಸ್ ಗೆ ಹೋಗಿದ್ದರು. ಅಲ್ಲಿ ಸ್ನೇಹಿತರು ಸ್ನಾನ ಮಾಡುತ್ತಿರುವಾಗ ಮನ್ವಿತ್ ಎತ್ತರದ ಬಂಡೆಯ ಮೇಲೆ ಕುಳಿತುಕೊಂಡಿದ್ದರು. ಈ ವೇಳೆ ಅವರು ಆಕಸ್ಮಿಕವಾಗಿ ತಲೆ ತಿರುಗಿ ಕೆಳಗೆ ನೀರಿಗೆ ಬಿದ್ದರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಅವರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಡಿ.17ರಂದು ಬೆಳಗ್ಗೆ ಮೃತಪಟ್ಟರೆಂದು ತಿಳಿದುಬಂದಿದೆ.
ಧರ್ಮಸ್ಥಳ ಪ್ರಕರಣ: 24 ದಿನಗಳ ಬಳಿಕ ಶಿವಮೊಗ್ಗದ ಕಾರಾಗೃಹದಿಂದ ಮಾಸ್ಕ್ ಮ್ಯಾನ್ ಚಿನ್ನಯ್ಯ ಬಿಡುಗಡೆ – vishwanews24
ಮನ್ವಿತ್ ರಿಗ ಮೂರ್ಛೆ ರೋಗವಿದ್ದು, ಈ ಬಗ್ಗೆ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
