ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸದೆ ಸಂಚರಿಸುವ ವಾಹನ ಸವಾರರಿಗೆ ಗುಲಾಬಿ ಹೂ ನೀಡಿ ಜಾಗೃತಿ ಮೂಡಿಸಿದ ಯಮ ಹಾಗೂ ಚಿತ್ರಗುಪ್ತ ವೇಷಧಾರಿಗಳಾದ ಕರಾವಳಿ ಚಿಯರ್ ಬಾಯ್ ಚೇತನ್ ಹಾಗೂ ಸಹಾಯಕರು .. – Vishwanews24
ನಿತ್ಯ ವಾಹನ ಸವಾರರ ಮೇಲೆ ವಿರುದ್ಧ ದಾಖಲು ಮಾಡಿದ್ರೂ, ಜಿಲ್ಲೆಯಲ್ಲಿ ಕಾನೂನು ಪಾಲನೆಯಾಗುತ್ತಿಲ್ಲ. ಹೀಗಾಗಿ ನಿರಂತರ ತಪ್ಪುಗಳನ್ನು ಸರಿಪಡಿಸುವ ಉದ್ದೇಶದಿಂದ ಪೊಲೀಸ್ ಇಲಾಖೆ ವಿನೂತನ ಕ್ರಮ ಕೈಗೊಂಡಿದೆ. ರಸ್ತೆ ಸುರಕ್ಷತಾ ಅಭಿಯಾನದ ಅಂಗವಾಗಿ ಈ ವಿಶಿಷ್ಟ ಕಾರ್ಯಕ್ರಮ ನಡೆಯಿತು.
ರಸ್ತೆ ಸಂಚಾರದ ವೇಳೆ ಸವಾರರು ಕಾನೂನು ಬಾಹಿರವಾಗಿ ನಡೆದುಕೊಂಡರೆ, ಯಮ ಮನೆಬಾಗಿಲು ತಟ್ಟುವ ಪರಿಸ್ಥಿತಿ ನಿರ್ಮಾಣವಾಗುತ್ತೆ ಅನ್ನೋದನ್ನು ಮನವರಿಕೆ ಮಾಡಿಕೊಡಲಾಯ್ತು.
ಕಲಾವಿದರಾದ ಚೇತನ್ ಹಾಗೂ ಸಹಾಯಕರು ಯಮ-ಚಿತ್ರಗುಪ್ತರ ವೇಷ ಧರಿಸಿ ರಸ್ತೆ ತುಂಬಾ ಓಡಾಡಿ ರಸ್ತೆ ನಿಯಮ ಪಾಲಿಸದ ಮಂದಿಗೆ ಜಾಗೃತಿ ಮೂಡಿಸಿದರು..
